ಸಾಂದೀಪ್ ವಿಶೇಷ ಮಕ್ಕಳ ಶಾಲೆ ಪ್ರಾರಂಭೋತ್ಸವ ಹಾಗೂ ಲಯನ್ಸ್ ವತಿಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ

0

ಎಂ ಬಿ ಫೌಂಡೇಶನ್ ಸಾಂದೀಪ್ ವಿಶೇಷ ಮಕ್ಕಳ ಶಾಲೆ ಪ್ರಾರಂಭೋತ್ಸವ ಕಾರ್ಯಕ್ರಮ ಸಾಂದೀಪ್ ವಿಶೇಷ ಮಕ್ಕಳ ಶಾಲಾ ಅವರಣದಲ್ಲಿ ನಡೆಯಿತು.
ವಿಶೇಷ ಮಕ್ಕಳನ್ನು ಶಾಲೆಯ ಗೇಟ್ ಬಳಿಯಿಂದ ಶಿಕ್ಷಕರು,ಪೋಷಕರು ಮತ್ತು ಸುಳ್ಯ ಲಯನ್ಸ್ ಕ್ಲಬ್ ಸದಸ್ಯರು ಸ್ವಾಗತಿಸಿ, ಡೋಲು ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಮಕ್ಕಳನ್ನು ಅದ್ದೂರಿಯಾಗಿ ಬರಮಾಡಿಕೊಂಡರು.

ಕಾರ್ಯಕ್ರಮವನ್ನು ಹಿರಿಯರು, ಮಹಿಳಾ ಸಮಾಜದ ಸ್ಥಾಪಕರಾದ ಶ್ರೀಮತಿ ನೇತ್ರಾವತಿ ಪಡ್ಡಂಬೈಲು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ ಬಿ ಫೌಂಡೇಶನ್ ಕೋಶಾಧಿಕಾರಿ ಪುಷ್ಪರಾಧಕೃಷ್ಣ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ ಮಾಡಿದರು.
ಎಂ ಬಿ ಫೌಂಡೇಶನ್ ನ ಗೌರವ ಸಲಹೆಗಾರರು, ಹಿರಿಯರಾದ ನೇತ್ರಾವತಿ ಪಡ್ಡಂಬೈಲು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು
ಲಯನ್ಸ್ ಕ್ಲಬ್ ಸುಳ್ಯ ಇದರ ವತಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ,ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಲ್ಲತ್ತಡ್ಕ, ಕೋಶಾಧಿಕಾರಿ ರಮೇಶ್, ಲ| ವಿರಪ್ಪ ಗೌಡ ಕಣಕ್ಕಲ್ ಲ|ತಮ್ಮಯ್ಯ ಗೌಡ, ಲ|ಪ್ರೋ. ರಾಮಚಂದ್ರ ಗೌಡ, ಲ|ರಾಧಾಕೃಷ್ಣ ಮಾಣಿಬೆಟ್ಟು, ಲ.ಶಾರದಾ ಶೇಟ್, ಲ|ಲಿಂಗಪ್ಪ ಗೌಡ ಕುರುಂಜಿ, ಲ|ದಯಾನಂದ, ಲ|ದಯಾನಂದ ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ಲಯನ್ಸ್ ವತಿಯಿಂದ ಸಿಹಿತಿಂಡಿ ವಿತರಿಸಿ ಮಕ್ಕಳೊಂದಿಗೆ ಸಹಭೊಜನ ಏರ್ಪಡಿಸಲಾಗಿತ್ತು.
ಎಂ ಬಿ ಫೌಂಡೇಶನ್ ಟ್ರಸ್ಟಿ ಶರೀಫ್ ಜಟ್ಟಿಪಳ್ಳ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಲಯನ್ಸ್ ಕೋಶಾಧಿಕಾರಿ ರಮೇಶ್ ಶೆಟ್ಟಿ ವಂದನಾರ್ಪಣೆ ಮಾಡಿದರು.