ತ್ಯಾಗ, ಬಲಿದಾನದ ಪ್ರತೀಕವಾದ ಪವಿತ್ರ ಬಕ್ರೀದ್ ಹಬ್ಬದ ಪ್ರಾರ್ಥನೆಯು ಗೂನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬರಾದ ಬಹು. ಅಬೂಬಕ್ಕರ್ ಸಿದ್ದೀಖ್ ಸಖಾಫಿ ಅಲ್ ಅರ್ಶದಿಯವರ ನೇತೃತ್ವದಲ್ಲಿ ಜರುಗಿತು.










ಮೇಲು, ಕೀಳು ಎಂಬ ಭೇದವಿಲ್ಲದೆ, ಸರ್ವರನ್ನೂ ಸಮಾನವಾಗಿ ಕಾಣುವಂತೆ ಇಸ್ಲಾಂ ನಮಗೆ ಬೋದಿಸುತ್ತದೆ, ಆ ದೃಷ್ಠಿಯಲ್ಲಿ ಎಲ್ಲರನ್ನು ಒಗ್ಗೂಡಿಸಿ ಸೌಹಾರ್ದತೆಯಿಂದ ನಾವು ಸಾಗಬೇಕೆಂದು ಅವರು ಕರೆ ನೀಡಿದರು. ಮುಅಲ್ಲಿಂ ಸವಾದ್ ಮದನಿ,
ಜಮಾಅತ್ ಅದ್ಯಕ್ಷರಾದ ಮಹಮ್ಮದ್ ಕುಂಞಿ
ಗೂನಡ್ಕ ಹಾಗೂ ಜಮಾಅತ್ ಪದಾಧಿಕಾರಿಗಳು, ಅಲ್ ಅಮೀನ್ ಸಂಸ್ಥೆಯ ಪದಾಧಿಕಾರಿಗಳು, ಸುನ್ನೀ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಮಾಅತ್ ಸದಸ್ಯರು ಈ ಸಂದರ್ಭ ಉಪಸ್ಥಿತರಿದ್ದರು.










