ಪಡ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ -ಯು ಕೆ ಜಿ ತರಗತಿ ಉದ್ಘಾಟನೆ

0


ಪಡ್ಪಿನಂಗಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ -ಯು ಕೆ ಜಿ ತರಗತಿಗಳು ಜೂ.9 ರಂದು ಉದ್ಘಾಟನೆ ನಡೆಯಿತು.
ವಲಯ ಅರಣ್ಯ ಅಧಿಕಾರಿ ಸಂತೋಷ್ ಕುಮಾರ್ ರೈ ಉದ್ಘಾಟಿಸಿದರು. ಎಲ್ ಕೆ ಜಿ -ಯು ಕೆ ಜಿ ತರಗತಿ ಅನುಷ್ಠಾನ ಸಮಿತಿ ಅಧ್ಯಕ್ಷ , ತಾಲೂಕು ಪಂಚಾಯತ್
ಮಾಜಿ ಸದಸ್ಯ ಅಬ್ದುಲ್ ಗಫೂರ್ ಮಾತನಾಡಿ
” ಪಡ್ಪಿನಂಗಡಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸ ಬೇಕು. ಶಾಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಎಲ್ ಕೆ ಜಿ -ಯು ಕೆ ಜಿ ತರಗತಿಗಳನ್ನು ದಾನಿಗಳ, ಪೋಷಕರ ಸಹಕಾರದಿಂದ ಆರಂಭಿಸಿದ್ದೇವೆ. ನಿಮ್ಮೆಲ್ಲರ ಸಹಕಾರ ಮುಂದೆ ಇದೇ ರೀತಿ ದೊರೆತರೆ ಒಂದರಿಂದ ಏಳನೇ ತರಗತಿ ವರೆಗೆ ಹಂತ ಹಂತವಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ಮಾಡಲು ಸಾಧ್ಯವಿದೆ. “. ಎಂದು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಮಹಮ್ಮದ್ ರಫೀಕ್ ಸಭಾಧ್ಯಕ್ಷತೆ ವಹಿಸಿದ್ದರು.

ಅತಿಥಿಯಾಗಿ ಉಪ ವಲಯ ಅರಣ್ಯ ಅಧಿಕಾರಿ ಪ್ರಕಾಶ್ ಅಗಸಿಮನಿ, ಅನುಷ್ಠಾನ ಸಮಿತಿ ಕಾರ್ಯದರ್ಶಿ, ಗ್ರಾಮ ಪಂಚಾಯತ್ ಸದಸ್ಯ ಲೋಕೇಶ್ ಆಕ್ರಿಕಟ್ಟೆ, ಶಾಲೆಯ ಸ್ಥಳದಾನಿ, ನಿವೃತ್ತ ಮುಖ್ಯ ಶಿಕ್ಷಕ ವಾಸುದೇವ ನಡ್ಕ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ರುಕ್ಮಿಣಿ ಕುಳ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮೀನಾಕ್ಷಿ,ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಮಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಲಾವಣ್ಯ ಮತ್ತು ಶ್ರೀಮತಿ ಸರೋಜಿನಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಧರ್ಮಾವತಿ ಸ್ವಾಗತಿಸಿದರು. ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಫೀಕ್ ಸಿ ಎಂ ವಂದಿಸಿದರು. ಶಿಕ್ಷಕರಾದ ಶ್ರೀಮತಿ ಸುಗಂಧಿ ಪುತ್ಯ, ಶ್ರೀಮತಿ ಲೋಕೇಶ್ವರಿ, ಗೌ.ಶಿಕ್ಷಕಿ ಸಕಿನಾ, ಎಲ್ ಕೆ ಜಿ -ಯು ಕೆ ಜಿ ಶಿಕ್ಷಕಿ ಸ್ಮಿತಾ ಸಹಕರಿಸಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಪಠ್ಯ ಪುಸ್ತಕ ವಿತರಣೆ ನಡೆಯಿತು.

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ,
ದತ್ತಿನಿಧಿ ಸ್ಥಾಪಕರು ಸುರೇಶ್ ಕುಮಾರ್ ನಡ್ಕ, ಬೆಳ್ಳಾರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್, ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಫೀಕ್ ಸಿ ಎಂ, ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾ ನಡ್ಕ, ಅಬ್ದುಲ್ ಖಾದರ್, ಎಣ್ಮೂರು ಸರಕಾರಿ ಪ್ರಾಥಮಿಕ ಶಾಲೆಯ ಅಧ್ಯಕ್ಷ ಎಸ್ ಡಿ ಎಂ ಸಿ ಅಬ್ದುಲ್ ಶರೀಫ್, ಶ್ರೀಮತಿ ನೇತ್ರಾವತಿ ಅಡ್ಕಾರ್, ಗಣೇಶ್ ಪಡ್ಪಿನಂಗಡಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಂತ್ಯಾಸ್, ಜಯರಾಮ ರೈ ಎಣ್ಮೂರು,ಅಬ್ದುಲ್ ಖಾದರ್, ಕುಶಾಲಪ್ಪ ಆಕ್ರಿಕಟ್ಟೆ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶ್ರೀಮತಿ ನಂದಿನಿ, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಹೇಶ್ ಆಕ್ರಿಕಟ್ಟೆ , ಎಸ್ ಡಿ ಎಂ ಸಿ ಸದಸ್ಯರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.