ವರ್ಗಾವಣೆಗೊಂಡ ಪುತ್ತೂರು ಬ್ಯಾಂಕ್ ಆಫ್ ಬರೋಡದ ಮುಖ್ಯ ವ್ಯವಸ್ಥಾಪಕರಿಗೆ ವಿದಾಯ ಹಾಗೂ ನೂತನ ವ್ಯವಸ್ಥಾಪಕರಿಗೆ ಸ್ವಾಗತ

0

ಪುತ್ತೂರು ಪ್ರಶಾಂತ್ ಮಹಲ್ ದರ್ಬೆಯಲ್ಲಿರುವ ಬ್ಯಾಂಕ್ ಆಫ್ ಬರೋಡ ಇದರ ಮುಖ್ಯ ವ್ಯವಸ್ಥಾಪಕರಾದ ಸಾಧಿಕ್ ಎಸ್.ಎಮ್.ರವರು ವರ್ಗಾವಣೆಗೊಂಡ ಸಂದರ್ಭದಲ್ಲಿ ‘ಸಹಕಾರ ರತ್ನ’ ಕೆ. ಸೀತಾರಾಮ ರೈ ಸವಣೂರು ಇವರು ಶುಭವಿದಾಯ ಕೋರಿದರು. ನಿಯುಕ್ತಗೊಂಡಿರುವ ಹೊಸ ಮುಖ್ಯ ವ್ಯವಸ್ಥಾಪಕರಾದ ಭರತ್ ಎಚ್.ವಿ. ಇವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಜಿ.ಎಮ್. ವಸಂತ ಜಾಲಾಡಿ, ಎಜಿಎಮ್ ಸುನಾದ್ ಶೆಟ್ಟಿ, ಪ್ರಶಾಂತ್ ಮಹಲ್‌ನ ಮ್ಯಾನೆಜರ್ ರಾಮಣ್ಣ ಗೌಡ, ಮದುಸೂದನ ಶೆಣೈ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.