ಬೀದಿಗುಡ್ಡೆ :ಕೃಷಿ ವಿಚಾರಗೋಷ್ಠಿ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ತೋಟಗಾರಿಕೆ ಇಲಾಖೆ ಸುಳ್ಯ ಮೈಕ್ರೋಬಿ ಆಗ್ರೋ ಟೆಕ್ ಪ್ರೈವೇಟ್ ಲಿಮಿಟೆಡ್ ಇದರ ಜಂಟಿ ಆಶ್ರಯದಲ್ಲಿ ಕೃಷಿ ವಿಚಾರಗೋಷ್ಠಿ ಜೂ. 10ರಂದು ಬೀದಿಗುಡ್ಡೆಯ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಹರಿಯಪ್ಪ ಗೌಡ ಪಟೋಳಿ ಉದ್ಘಾಟಿಸಿದರು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಸದಾನಂದ ಕಾರ್ಜ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಬಳ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷಿತ್ ಕಾರ್ಜ, ಸಹಾಯಕ ತೋಟಗಾರಿಕಾ ಅಧಿಕಾರಿ ಸುಳ್ಯ ವಿಜೀತ್, ಕೋಸ್ಟರ್ ಆಫೀಸರ್ ರವಿಶಂಕರ್ ತೊಡಿಕಾನ,ಸಂಪನ್ಮೂಲ ವ್ಯಕ್ತಿಗಳಾಗಿ ಮೈಕ್ರೋಬಿ ಆಗ್ರೋ ಟೆಕ್ ಪ್ರೈವೇಟ್ ಲಿಮಿಟೆಡ್ ನ ಝೋನಲ್ ಹೆಡ್ ಶ್ರೀಕಾಂತ, 3 ಎಫ್ ಆಯಿಲ್ ಪಾಲ್ಮ್ ನ ಏರಿಯಾ ಮೆನೇಜರ್ ಕೃಷ್ಣ ವೈ ಟಿ , ತಾಳೆ ಬೆಳೆ ಪ್ರಗತಿ ಪರ ಕೃಷಿಕರು ಪ್ರೇಮಾ ವಸಂತ ರಾವ್ ಹಾಗೂ ದಿವ್ಯ ಜ್ಯೋತಿ ಎಂಟರ್ ಪ್ರೈಸಸ್ ಸಹಕಾರ ರತ್ನ ಲlಎ ಸುರೇಶ್ ರೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ,ನಿರ್ದೇಶಕರಾದ ಸುಬ್ರಮಣ್ಯ ಕುಳ, . ಚಿನ್ನಪ್ಪ ಗೌಡ ಚೊಟ್ಟೆಮಜಲು , ಆರುಣ ರೈ ಗೆಜ್ಜೆ, ವಾಸುದೇವ ಗೌಡ ಕೆರೆಕ್ಕೋಡಿ, ತಿಮ್ಮಪ್ಪ ಗೌಡ ಕೂತ್ಕುಂಜ , ಶ್ರೀಮತಿ ಬೇಬಿ ಕಟ್ಟ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಸುಬ್ರಮಣ್ಯ ಕುಳ ಸ್ವಾಗತಿಸಿದರು.
ಚಂದ್ರಶೇಖರ ಪಿ ಕೆ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಿ ವಂದಿಸಿದರು. ಸಂಘದ ಸದಸ್ಯರು ಪಾಲ್ಗೊಂಡಿದ್ದರು.
: