ವಿವೇಕಾನಂದ ವಿದ್ಯಾಸಂಸ್ಥೆಗಳ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಜೂ. ೧೦ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕುಂಕುಮ ಫ್ಯಾಶನ್ ಸುಳ್ಯ ಇದರ ಮಾಲಕರಾದ ಭೀಮರಾವ್ ದಂಪತಿಗಳು ಆಗಮಿಸಿದ್ದರು. ಮಾತೆಯರು ನೂತನ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕಧಾರಣೆ ಮಾಡಿ ಸಂಸ್ಥೆಗೆ ಆಹ್ವಾನಿಸಿಕೊಂಡರು. ಅತಿಥಿಗಳಾಗಿ ಮಾತನಾಡಿದ ಭೀಮರಾವ್ ಅವರು ವಿದ್ಯಾರ್ಥಿಗಳು ಬಾಲ್ಯದಿಂದಲೇ ಜೀವನ ಮೌಲ್ಯಗಳು ಮೈಗೂಡಿಸಿಕೊಂಡರೆ ಅದುವೇ ಸಾರ್ಥಕತೆಯ ಜೀವನ ಆಗುವುದು ಎಂದು ನುಡಿದರು.









ಬಳಿಕ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಅಧಿಕಾರಿಗಳಾದ ಎನ್. ಗೋಪಾಲ್ ರಾವ್ ರವರು ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ನ. ಸೀತಾರಾಮ್ ವಹಿಸಿದ್ದರು. ವೇದಿಕೆಯಲ್ಲಿ ಸಂಚಾಲಕರಾದ ಡಾ. ಗೋಪಾಲಕೃಷ್ಣ ಭಟ್ ,ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಸುಧಾಕರ್ ಕಾಮತ್ ಸದಸ್ಯರುಗಳಾದ ಶ್ರೀಮತಿ ಲತಾ ಮಧುಸೂಧನ್, ಶಿವಪ್ರಸಾದ್ ಉಗ್ರಾಣಿಮನೆ, ಹೇಮಂತ ಮಠ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸರ್ವರನ್ನು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಗಿರೀಶ್ ಕುಮಾರ್ ಎ. ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜಯಪ್ರಸಾದ್ ಕಾರಿಂಜ ವಂದಿಸಿದರು.










