








ಜೇಸಿಐ ಭಾರತದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವಲಯ 15 ರ ವ್ಯಾಪ್ತಿಯ ಮಧ್ಯಂತರ ಸಮ್ಮೇಳನ-2025 ದುಂದುಭಿ” ಜೇಸಿಐ ಬೆಳ್ಮಣ್ ಘಟಕದ ಆತಿಥ್ಯದಲ್ಲಿ ಕಾರ್ಕಳ ನಿಟ್ಟೆಯ ಸನ್ಮಾನ್ ರೀಸಿಡೆನ್ಸಿಯಲ್ಲಿ ನಡೆಯಿತು. ಸಮ್ಮೇಳನದಲ್ಲಿ ಘಟಕಾಧ್ಯಕ್ಷ JFM ವಾಚಣ್ಣ ಕೆರೆಮೂಲೆ ನೇತೃತ್ವದ ಜೇಸಿಐ ಪಂಜ ಪಂಚಶ್ರೀ ಘಟಕಕ್ಕೆ ಅತ್ಯುತ್ತಮ ಪ್ರಾದೇಶಿಕ ಘಟಕ ರನ್ನರ್ ಪ್ರಶಸ್ತಿ, ಅತ್ಯುತ್ತಮ ಸ್ಪೆಷಲ್ ಪ್ರಾಜೆಕ್ಟ್ ರನ್ನರ್ ಅವಾರ್ಡ್, ಗೋಲ್ಡನ್ ಲೋಮ್ ಪ್ರೆಸಿಡೆಂಟ್ ಅವಾರ್ಡ್ ಮುಂತಾದ ಹಲವು ಪ್ರಶಸ್ತಿ ಮನ್ನಣೆಗಳು ಲಭಿಸಿದೆ. ಪ್ರಶಸ್ತಿಗಳನ್ನು ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ವಾಚಣ್ಣ ಕೆರೆಮೂಲೆರವರು ವಲಯಾಧ್ಯಕ್ಷರಾದ ಜೇಸ ಐ ಸೇನೆಟರ್ ಅಭಿಲಾಷ್ ಬಿ. ಎ ವಲಯಾಧ್ಯಕ್ಷ ವಲಯ 15 ಜೇಸಿಐ ಭಾರತ ಇವರಿಂದ ಪ್ರಶಸ್ತಿ ಸ್ವೀಕರಿಸಿದರು.

ಈ ಸಮಾರಂಭದ ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಪ್ರಾಂತ್ಯ ಎಫ್ ನ JFF ಸಂತೋಷ್ ಶೆಟ್ಟಿ, ವಲಯ ಉಪಾಧ್ಯಕ್ಷ ಪ್ರಾಂತ್ಯ ಡಿ JFM ರಂಜಿತ್ ಯಚ್.ಡಿ. ವಲಯಾಧಿಕಾರಿ ಪಂಜ ಪಂಚಶ್ರೀ ಜೇಸಿಸ್ ನ ಪೂರ್ವಾಧ್ಯಕ್ಷ JFD ಲೋಕೇಶ್ ಆಕ್ರಿಕಟ್ಟೆ ಸಮ್ಮುಖದಲ್ಲಿ ವಾಚಣ್ಣ ಕೆರೆಮೂಲೆ ರವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಜೇಸಿಐ ಪಂಜ ಘಟಕದ ಉಪಾಧ್ಯಕ್ಷರಾದ ಜೇಸಿ ಕುಸುಮಾಧರ ಕಕ್ಯಾನ, ಕಾರ್ಯದರ್ಶಿ JFM ಅಶ್ವಥ್ ಬಾಬ್ಲುಬೆಟ್ಟು ಮತ್ತು ಖಜಾಂಜಿ JFM ಗಗನ್ ತೆಂಕಪಾಡಿ ಉಪಸ್ಥಿತರಿದ್ದರು.










