ಸುಳ್ಯದಲ್ಲಿ ಪಾರಂಪರಿಕ ವೈದ್ಯಕೀಯ ಶಕ್ತಿ ವೈದ್ಯ ಪದ್ದತಿ ಕೇಂದ್ರ ಶುಭಾರಂಭ

0

ಸುಳ್ಯದ ಜಟ್ಟಿಪಳ್ಳ ರಸ್ತೆಯ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಪಾರಂಪರಿಕ ವೈದ್ಯಕೀಯ ಶಕ್ತಿ ವೈದ್ಯ ಪದ್ದತಿ ಕೇಂದ್ರ ಜೂ.9 ರಂದು ಉದ್ಘಾಟನೆಗೊಂಡಿತು.

ಕೇಂದ್ರವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸುಳ್ಯ ಇದರ ಸಂಚಾಲಕರಾದ ಬಿ. ಕೆ ಉಮಾದೇವಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಿಶ್ವ ಕಾಂ್ಲೆಕ್ಸ್ ಆಡಳಿತ ಪಾಲುದಾರರಾದ ಸಂದೇಶ ಕೆ.ಜೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಸಂಪಾದಕ ಹರೀಶ್ ಬಂಟ್ವಾಳ್ ಉಪಸ್ಥಿತರಿದ್ದರು.
ಪಾರಂಪರಿಕ ಶಕ್ತಿ ವೈದ್ಯ ಪದ್ಧತಿ ಕೇಂದ್ರದ ಸಂಚಾಲಕರೂ, ಕೃಷ್ಣಾರ್ಪಣ ಧರ್ಮಸ್ಥಾಪನ ಫೌಂಡೇಶನ್ ಸ್ಷಿರಿಚುಯಲ್ ಸೈನ್ಸ್ ಎಜುಕೇಶನ್ ಇದರ ಆಡಳಿತ ನಿರ್ದೇಶಕರೂ ಆದ ಹೊನ್ನಪ್ಪ ಗೌಡ ಪೊಯ್ಯೆಮಜಲು ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕೇಂದ್ರದಲ್ಲಿ ನೀಡಲಾಗುವ ಥೆರಪಿಗಳ ಬಗ್ಗೆ ವಿವರಿಸಿದರು.
ಬಿ.ಎಸ್.ಎನ್.ಎಲ್ ನಿವೃತ್ತ ಸಬ್ ಡಿವಿಷನ್ .ಇಂಜಿನಿಯರ್ ತಿಮ್ಮಪ್ಪ ಗೌಡರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರೇಮಚಂದ್ರ ಪದೇಲ, ಸುಮತಿ ನಾಯಕ್, ಹೂವಪ್ಪ ಗೌಡ ಪುತ್ತೂರು, ಧನಂಜಯ ಪುತ್ತೂರು, ಜನಾರ್ದನ ದೋಳ, ಶ್ರೀಮತಿ ಕುಸುಮಾವತಿ ಪೊಯ್ಯೆಮಜಲು, ಶ್ರೀಮತಿ ಪಾರ್ವತಿ ಮುಚ್ಚಾರ, ಜಯಶ್ರೀ ಜಯನಗರ ಮತ್ತಿತರರು ಉಪಸ್ಥಿತರಿದ್ದರು.

ಪಾರಂಪರಿಕ ಶಕ್ತಿ ವೈದ್ಯ ಪದ್ಧತಿಯ ಈ ಕೇಂದ್ರದಲ್ಲಿ ನಾಡಿ ಸ್ವರ ಪರೀಕ್ಷೆ , ಧಾನ್ಯ ಥೆರಪಿ, ಕಲರ್ ಥೆರಪಿ, ಯೋಗ ಥೆರಪಿ, , ಅಕ್ಯುಫ್ರೆಶರ್ ಥೆರಪಿ, ಸಮ್ಮೋಹನ ಥೆರಪಿ, ಅರಿಕ್ಯುಲರ್ ಥೆರಪಿ, ಮುದ್ರೆ ಥೆರಪಿ, ಮುಂತಾದ ಚಿಕಿತ್ಸೆಯ ವ್ಯವಸ್ಥೆಗಳಿದ್ದು. ಇಲ್ಲಿ ಬಿಳಿ ಸೆರಗು, ಲಿವರ್ ಸಮಸ್ಯೆ, ಅಲರ್ಜಿ, ಥೈರಾಯಿಡ್, ಗಂಟು ನೋವು, ಕತ್ತು ನೋವು, ಹಿಮೋಗ್ಲೋಬಿನ್, ಪಿತ್ತ, ಕೊಲೆಸ್ಟ್ರಾಲ್, ಪಿ ಸಿ ಒ. ಡಿ, ಬಿ.ಪಿ, ಶುಗರ್, ಉಬ್ಬಸ , ಮಂಡಿನೋವು, ಗ್ಯಾಸ್ಟ್ರಿಕ್, ಅಸಿಡಿಟಿ , ಕಿಡ್ನಿ ಸಮಸ್ಯೆ ಮತ್ತಿತರ ಸಮಸ್ಯೆಗಳಿಗೆ ಪರಿಹಾರ ಇರುವುದಾಗಿ ಸಂಸ್ಥೆಯವರು ತಿಳಿಸಿದ್ದಾರೆ.