ಕು. ಯಜ್ಞ ಕಾಳಮ್ಮನೆಯವರಿಗೆ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 21 ಅಂಕ

0

ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಯಜ್ಞ ಕಾಳಮ್ಮನೆಯವರಿಗೆ ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ ಕನ್ನಡ ವಿಷಯದಲ್ಲಿ 21 ಅಂಕ ಬಂದಿದ್ದು ಒಟ್ಟು ಅಂಕ 612 ಲಭಿಸಿದೆ.

ಈ ಹಿಂದೆ ಕನ್ನಡ ವಿಷಯದಲ್ಲಿ 104 ಅಂಕಗಳಿಸಿದ್ದು ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿಯಾಗಿ 21 ಅಂಕ ಲಭಿಸಿ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಶಾಲೆಯ ಇನ್ನೋರ್ವ ವಿದ್ಯಾರ್ಥಿನಿ ಸುದೀಕ್ಷಾ ಕೆ.ಎಸ್ ರವರು ಈ ಹಿಂದೆ 612 ಅಂಕಗಳಿಸಿದ್ದರು.

ಯಜ್ಞರವರು ಜಾಲ್ಸೂರು ಗ್ರಾಮದ ಕಾಳಮ್ಮನೆ ನಿವಾಸಿ, ಕನಕಮಜಲು ಸೊಸೈಟಿಯ ನಿವೃತ್ತ ಉಪ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಂಗಾಧರ ಕಾಳಮ್ಮನೆ ಮತ್ತು ಜೀವವಿಮಾ ಪ್ರತಿನಿಧಿ ವಿಜಯ ದಂಪತಿಗಳ ಪುತ್ರಿ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.