28 ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರ ಬಿಡುಗಡೆ

0

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸಮ್ಮೇಳನ ಸ್ವಾಗತ ಸಮಿತಿ ಕುಕ್ಕುಜಡ್ಕ ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 28 ನೇ ಕನ್ನಡ ಸಾಹಿತ್ಯ ಸಮ್ಮೇಳನವು
ಡಿ. 30 ರಂದು
ಡಾ. ಪೈಲೂರು ಗೋಪಾಲಕೃಷ್ಣ ವೇದಿಕೆ ಅಬಸಮ ಸಭಾಂಗಣ ಕುಕ್ಕುಜಡ್ಕದಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರ ಬಿಡುಗಡೆಯು ಡಿ. 11 ರಂದು ಕುಕ್ಕುಜಡ್ಕ ಪ್ರೌಢಶಾಲೆಯ ಸಭಾಭವನದಲ್ಲಿ ನಡೆಯಿತು.

ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರವರು ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಿದರು .

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೆರಾಲು, ಕೋಶಾಧಿಕಾರಿ ದಯಾನಂದ ಆಳ್ವ, ಸಮ್ಮೇಳನದ ಕಾರ್ಯಾಧ್ಯಕ್ಷ ಕೃಷ್ಣಪ್ರಸಾದ್ ಮಾಡಬಾಕಿಲು, ಕೋಶಾಧಿಕಾರಿ ಅರುಣ್ ಕುಮಾರ್ ಮುಂಡಾಜೆ, ಪ್ರಧಾನ ಕಾರ್ಯದರ್ಶಿ ತೇಜಸ್ವಿ ಕಡಪಳ, ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು,
ಹಿರಿಯ ಸಾಹಿತಿ ಎಂ.ಟಿ ಶಾಂತಿಮೂಲೆ, ಸಂಜೀವ ಕುದ್ಪಾಜೆ, ಕೇಶವ ಸಿ.ಎ, ಹರ್ಷವರ್ಧನ ಬೊಳ್ಳೂರು, ಮುಖ್ಯ ಶಿಕ್ಷಕ ಸಂಕೀರ್ಣ ಚೊಕ್ಕಾಡಿ, ಲತಾಶ್ರೀ ಸುಪ್ರೀತ್ ಮೊಂಟಡ್ಕ, ತಿರುಮಲೆಶ್ವರ ದಂಬೆತೋಟ, ವಿಶ್ವನಾಥ ಮೂಕಮಲೆ, ಯಾದವೇಂದ್ರ ಕಡಪಳ, ಶಿಕ್ಷಕರಾದ ಹರಿಪ್ರಸಾದ್, ಶೋಭಾ ಎಚ್, ಭವ್ಯ ಕೆ, ಸಂಧ್ಯಾಕುಮಾರಿ, ಮಿಥುನ್ ಕೆ,ಜಯಶ್ರೀ, ಚೈತನ್ಯ ಬೊಳ್ಳೂರು, ಧನ್ಯ ರಾಜ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿ, ಸಂಕೀರ್ಣ ಚೊಕ್ಕಾಡಿ ವಂದಿಸಿದರು.