








ತಂದೆ ತಾಯಿ ಯನ್ನು ಕಳಕೊಂಡು ಇದೀಗ ಅಜ್ಜಿಯ ಆಶ್ರಯದಲ್ಲಿ ವಾಸವಾಗಿರುವ ರಾಕೇಶ್ ಎಂಬ ಹುಡುಗನಿಗೆ ಮನೆಯಲ್ಲಿ ತುಂಬ ಬಡತನವಿದ್ದು ಬಡತನದ ನಡುವೆಯೂ ಆತನ ಅಜ್ಜಿ ಆತನನ್ನು ಕಷ್ಟದಿಂದ ಅಡ್ಪಂಗಾಯ ಶಾಲೆಗೆ ಕಳುಹಿಸುತ್ತಿದ್ದಾರೆ.
ಈ ವಿಷಯ ತಿಳಿದ ಆದಿದ್ರಾವಿಡ ಯುವ ವೇದಿಕೆ ದ. ಕ ಹಾಗೂ ತಾಲೂಕು ಸಮಿತಿ, ಮಹಿಳಾ ಸಮಿತಿ ಮತ್ತು ಗ್ರಾಮ ಘಟ ಸಮಿತಿಯ ಪದಾಧಿಕಾರಿಗಳು ಆತ ವಿದ್ಯಾಭ್ಯಾಸ ಮಾಡುತ್ತಿರುವ ಶಾಲೆಗೆ ಭೇಟಿ ನೀಡಿ ಶಾಲಾ ಶುಲ್ಕ ಹಾಗೂ ಸಮವಸ್ತ್ರ ನೀಡಿ ವಿದ್ಯಾರ್ಥಿಯ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಮಾಡಲಾಯಿತು.










