ದಾವೂದ್ ಪೊಳೆಂಜ ಎಂ.ಎ. ಕ್ಲಿನಿಕಲ್ ಸೈಕೋಲಜಿ ಕೋರ್ಸ್ ನಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ನವ ದೆಹಲಿ ಇವರು ನಡೆಸಿದ ಎಂ.ಎ. ಕ್ಲಿನಿಕಲ್ ಸೈಕೋಲಜಿ ಕೋರ್ಸ್ ನಲ್ಲಿ ದಾವೂದ್ ಪೊಳೆಂಜ ಅವರು ಡಿಸ್ಟಿಂಕ್ಷನ್
ನೊಂದಿಗೆ ತೇರ್ಗಡೆಗೊಂಡಿದ್ದಾರೆ.

ದಾವೂದ್ ಅವರು 2002 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಸೂಕ್ಷ್ಮ ಜೀವವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ಪದವಿ ಪಡೆದಿದ್ದು,
2008 ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಪಂಜದ ಪೊಳೆಂಜದವರಾದ ದಾವೂದ್ ಪ್ರಸ್ತುತ, ದುಬೈನ ಪ್ರತಿಷ್ಠಿತ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಪಂಜ ಸರಕಾರಿ ಜೂನಿಯರ್ ಕಾಲೇಜಿನ ಹಳೆ ವಿದ್ಯಾರ್ಥಿ.