ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ಇದರ ದಕ್ಷಿಣ ಕನ್ನಡ, ಉಡುಪಿ, ಕೊಡಗು ಈ ಮೂರು ಜಿಲ್ಲೆಗಳಿಗೆ ಸಂಸ್ಥೆಯು ನಡೆಸಿದ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳಲ್ಲಿ ಹಾಗೂ ಜಿಲ್ಲಾ ಮಟ್ಟದ ಉತ್ತಮ ಕೃಷಿ ಸಖಿ ಎಂದು ಗುರುತಿಸಲ್ಪಟ್ಟ ಮೋಹಿನಿ (ನಿಶಾ) ವಿಶ್ವನಾಥ್ ಇವರನ್ನು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಸೀನಿಯರ್ ಪ್ರಾಜೆಕ್ಟ್ ಆಫೀಸರ್ ಆಗಿ ನೇಮಕಗೊಳಿಸಿದ್ದಾರೆ.















ಇವರು ದ. ಕ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಹಲವಾರು ವರ್ಷಗಳಿಂದ ಕೃಷಿ ಸಖಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಮಹಿಳಾ ಸ್ವಸಹಾಯ ಸಂಘಗಳಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ.ಹಾಗೂ ಮಂಗಳೂರಿನಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆಯಂದು ಜಿಲ್ಲಾ ಮಟ್ಟದ ಉತ್ತಮ ಕೃಷಿ ಸಖಿ ಪ್ರಶಸ್ತಿಗೆ ಕೂಡಾ ಲಭಿಸಿತು. ಇವರು ನಮ್ಮ ‘ ನಮ್ಮ ಗ್ರಾಮ – ನಮ್ಮ ಹೆಮ್ಮೆ’ ಸಂಪಾಜೆ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಮೂಲತಃ ಪೇರಡ್ಕ ವಿಶ್ವನಾಥ್ ಪಿ.ಆರ್ ಅವರ ಪತ್ನಿಯಾಗಿದ್ದಾರೆ.










