ಇತರ ಬಸ್ ಗಳಿಗೆ ಬ್ಯಾರಿಕೇಡ್ ಅಡ್ಡ ಇಟ್ಟು ದಿಗ್ಬಂಧನ ವಿಧಿಸಿದ ಯಾತ್ರಿಕರು
ಪೊಲೀಸರ ಆಗಮನ,
ಬಸ್ ಕೆಟ್ಟದ್ದರಿಂದ ಹೀಗಾಯ್ತು : ಅಧಿಕಾರಿ ಸ್ಪಷ್ಟನೆ
ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ
ಸಕಲೇಶ ಪುರ, ಹಾಸನ, ಚನ್ನರಾಯಪಟ್ಟಣ , ಕುಣಿಗಲ್ ಮತ್ತಿತರ ಕಡೆಯ ಪ್ರಯಾಣಕ್ಕೆ ಬಸ್ ಇಲ್ಲದೆ ಅಕ್ರೋಶಿತರಾಗಿ ಪ್ರಯಾಣಿಕರು
ಬಸ್ ಗಳ ಪ್ರಯಾಣಕ್ಕೆ ದಿಗ್ಬಂಧನ ಹಾಕಿ, ಬ್ಯಾರಿ ಕೇಡ್ ಎಳೆದು ಅಡ್ಡ. ಇಟ್ಡು ಬಸ್ ಗಳ ಸಂಚಾರಕ್ಕೆ ತಡೆಯುಂಟು ಮಾಡಿದ, ಪೊಲೀಸರ ಆಗಮನ ಬಳಿಕ ಪ್ರಯಾಣಿಕರನ್ನು ಚಧುರಿಸಿದ ಮತ್ತು ಬಸ್ ವ್ಯವಸ್ಥೆ ಮಾಡಿ ಪ್ರಕರಣ ಸುಖಾಂತ್ಯವಾದ ಘಟನೆ ಜೂ.15 ರಂದು ವರದಿಯಾಗಿದೆ.
















ಸುಬ್ರಹ್ಮಣ್ಯಕ್ಕೆ ಇಂದು ಅಪಾರ ಯಾತ್ರಿಕರೂ ಬಂದಿದ್ದು ಅಪಾರ ಯಾತ್ರಿಕರೂ ಬಸ್ ತಂಗುದಾಣಕ್ಜೆ ಬಂದಿದ್ದರು. ತಂಗುದಾಣದಲ್ಲಿ ಬೆಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ ಹತ್ತಿಸಿದರು ಎನ್ನಲಾಗಿದೆ., ಆದರೆ ಸಕಲೇಶ ಪುರ, ಹಾಸನ, ಚನ್ನರಾಯಪಟ್ಟಣ, ಕುಣಿಗಲ್ ಹೋಗುವ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಇಲ್ಲದಾಗಿತ್ತು. ಇದರಿಂದ ಅಕ್ರೋಶ ಗೊಂಡ ಪ್ರಯಾಣಿಕರು ಅಲ್ಲೇ ಹತ್ತಿರದಲ್ಲಿದ್ದ ಪೊಲೀಸ್ ಬ್ಯಾರಿ ಕೇಡ್ ನ್ನು ರಸ್ತೆಗೆ ಅಡ್ಡ ಇಟ್ಟು ಯಾವುದೇ ಬಸ್ ಹೋಗದಂತೆ ತಡೆದರೆನ್ನಲಾಗಿದೆ. ಇದನ್ನು ಮನಗಂಡ ಕೆ.ಎಸ್.ಆರ್.ಡಿ ಅಧಿಕಾರಿಗಳು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅವರು ಬಂದು ಗುಂಪು ಗೂಡಿದ್ದ ಯಾತ್ರಿಕರನ್ನು ಚದುರಿಸದರೆನ್ನಲಾಗಿದೆ. ಬ್ಯಾರಿ ಕೇಡ್ ತೆಗೆದು ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ಬಗ್ಗೆ ಸುಬ್ರಹ್ಮಣ್ಯ ದ ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಬಳಿ ವಿಚಾರಿಸಿದಾಗ ಬೆಂಗಳೂರಿಗೆ ಹೋಗುವ ಒಂದು ಕೆಟ್ಟಿದ್ದು ಪ್ರಯಾಣಿಕರಿಗೆ ತೊಂದರೆ ಉಂಟಾಯ್ತು. ಸುಳ್ಯ ಡಿಪೋ ದಿಂದ ಮೆಕಾನಿಕ್ ಬಂದು ಬಸ್ ರಿಪೇರಿ ಮಾಡಿದ ಮೇಲೆ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಯಿತು ಎಂದಿದ್ದಾರೆ.










