














ಜಾಲ್ಸೂರು ವಿನೋಬನಗರ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಮತ್ತು ಪೋಷಕರ ಸಮಾವೇಶ ಹಾಗೂ ಸ್ಥಾಪಕರ ಸಂಸ್ಮರಣೆ ಕಾರ್ಯಕ್ರಮ ಜೂನ್.೨೩ರಂದು ಸೋಮವಾರ ದಿನ ಬೆಳಗ್ಗೆ ೯ ಗಂಟೆಗೆ ನಡೆಯಲಿದೆ.
ಸಮಾರಂಭಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಸಾಮಾಜಿಕ ಚಿಂತಕರು ಹಾಗೂ ವಾಗ್ಮಿಗಳಾಗಿರುವ ದಾಮೋದರ ಶರ್ಮ ಬಾರ್ಕೂರು ಆಗಮಿಸಲಿದ್ದು, ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕರ್ನಾಟಕ ಪೋಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಭಿಷೇಕ್ ಅಡ್ಕಾರ್‌ರನ್ನು ಅಭಿನಂದಿಸಲಾಗುತ್ತದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.










