ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ವಿದ್ಯಾರ್ಥಿಸಂಘ ಉದ್ಘಾಟನೆ

0


ವಿದ್ಯಾರಶ್ಮಿ ವಿದ್ಯಾಲಯದಲ್ಲಿ ೨೦೨೫-೨೬ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಸಂಸ್ಥೆಯ ಸಂಚಾಲಕರಾದ ಸವಣೂರು ಸೀತಾರಾಮ ರೈ ಕೆ ಉದ್ಘಾಟಿಸಿದರು. ಬಳಿಕ ವಿದ್ಯಾರ್ಥಿಸಂಘದ ಪದಾಧಿಕಾರಿಗಳನ್ನು ಕ್ಯಾಬಿನೆಟ್ ಬ್ಯಾಜ್ ತೊಡಿಸುವುದರ ಮೂಲಕ ಅಭಿನಂದಿಸಿ, ಎಲ್ಲರೂ ಜೊತೆಯಾಗಿ ಸೇರಿಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವುದು ನಾಯಕತ್ವ” ಎಂದು ನುಡಿದರು. ಮುಖ್ಯ ಅತಿಥಿಗಳಾದ ಶ್ರುತ ಅಕಾಡೆಮಿ ಮಂಗಳೂರು ಇದರ ನಿರ್ದೇಶಕರಾದ ಡಾ. ಶ್ರುತಕೀರ್ತಿರಾಜ ಎಸ್ ಬಿ ವಿದ್ಯಾರ್ಥಿಗಳಿಗೆ ನಾಯಕತ್ವದ ಮಹತ್ವ , ಮುಖ್ಯ ಪಾತ್ರ ಮತ್ತು ಜವಬ್ದಾರಿಯನ್ನು ತಿಳಿಸಿಕೊಟ್ಟರು. ಸಂಸ್ಥೆಯ ಆಡಳಿತಾಧಿಕಾರಿಗಳಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ ಯವರು ಅದ್ಯಕ್ಷ ನೆಲೆಯಲ್ಲಿ ಮಾತಾನಾಡಿ ನಾಯಕತ್ವ ಎನ್ನುವುದು ಬರಿ ಹುದ್ದೆಯಲ್ಲ, ಸಮಸ್ಯೆಗಳನ್ನು ಚಾಣಾಕ್ಷತೆಯಿಂದ ಬಗೆಹರಿಸುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ‘ಒಲಿಂಪಿಯಾಡ್’ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕಿ ಲಿಖಿತಾ ಎಂ ಎನ್ ನಡೆಸಿಕೊಟ್ಟರು.


ವೇದಿಕೆಯಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಎನ್ ಸುಂದರ್ ರೈ, ಆಡಳಿತಾಧಿಕಾರಿಗಳಾದ ಅಡ್ವಕೇಟ್ ಅಶ್ವಿನ್ ಎಲ್ ಶೆಟ್ಟಿ, ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ , ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ರಾಮ್ ಪ್ರಸಾದ ಕುಲಾಯಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ೧೦ನೇ ತರಗತಿಯ ಸಜಾ ನಿರೂಪಣೆಗೈದು, ಮುಖ್ಯ ಅತಿಥಿಗಳ ಪರಿಚಯವನ್ನು ಒಂಭತ್ತನೇ ತರಗತಿಯ ಶ್ರೀಷಾ, ಸಂವಿಧಾನದ ಪೀಠಿಕೆಯನ್ನು ೫ನೇ ತರಗತಿಯ ಜಾಸಿಂ ವಾಚಿಸಿ, ಶ್ರುತಜೈನ್ ಮತ್ತು ಬಳಗ ಪ್ರಾರ್ಥನೆಯನ್ನು ಸಲ್ಲಿಸಿದರು, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಖದೀಜತ್ ಅಝೀ ಸ್ವಾಗತಿಸಿ, ವಿದ್ಯಾರ್ಥಿಸಂಘದ ಅಧ್ಯಕ್ಷೆ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಆವನಿ ರೈ ವಂದನಾರ್ಪಣೆಗೈದರು.