ಹರಿಹರ ಪಲ್ಲತಡ್ಕದಲ್ಲಿ ಗ್ರಾಮ ಆಡಳಿತಾಧಿಕಾರಿ, ಆಡಳಿತ ಕಛೇರಿ ತೆರೆಯಲು ಆಗ್ರಹ
ನೆಟ್ವರ್ಕ್ ಸಮಸ್ಯೆ, ಬಾಳುಗೋಡಿನಲ್ಲಿ ನರ್ಸ್ ಕ್ವಾರ್ಟರ್ಸ್ ಬಗ್ಗೆ, ಕಟ್ಟಡ ವಿನ್ಯಾಸ ರಚನೆಗೆ ಎನ್.ಒ.ಸಿ ಬಗ್ಗೆ ಚರ್ಚೆ

ಹರಿಹರ ಪಲ್ಲತಡ್ಕ ಗ್ರಾ.ಪಂ ನ ಗ್ರಾಮ ಸಭೆ ಜೂ.26 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.








ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ವಿಜಯ ಕುಮಾರ್ ಅಂಙಣ ವಹಿಸಿದ್ದರು. ನೋಡೆಲ್ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆಯ ಪುತ್ತೂರು ಕಛೇರಿ ಅಧೀಕ್ಷಕ ಕೃಷ್ಣ ಇದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಜಯಂತ ಬಾಳುಗೋಡು, ಗ್ರಾ.ಪಂ ಸದಸ್ಯರಾದ ಪೃಥ್ವಿಚಂದ್ರ ಮುಂಡಾಜೆ, ಶ್ರೀಮತಿ ಪದ್ಮಾವತಿ ಕಲ್ಲೇಮಠ, ಶ್ರೀಮತಿ ಶಿಲ್ಪ ಕೊತ್ನಡ್ಕ, ಪಿಡಿಒ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು. ಶ್ಯಾಮ್ ಪ್ರಸಾದ್ ವರದಿ ವಾದಿಚಿಸಿದರು.

ಸಭೆಯಲ್ಲಿ ಹರಿಹರದಲ್ಲಿ ಗ್ರಾಮ ಆಡಳಿತಾಧಿಕಾರಿ ಕಛೇರಿ ತೆರೆಯಲು, ಆಡಳಿತಾಧಿಕಾರಿ ನೇಮಿಸಲು, ಬಿ.ಎಸ್. ಎನ್. ಎಲ್ ನೆಟ್ವರ್ಕ್ ಸಮಸ್ಯೆ, ಬಾಳುಗೋಡಿನಲ್ಲಿ ನರ್ಸ್ ಕ್ವಾರ್ಟರ್ಸ್ ಬಗ್ಗೆ, ಕಟ್ಟಡ ವಿನ್ಯಾಸ ರಚನೆಗೆ ಎನ್.ಒ.ಸಿ ಬಗ್ಗೆ ಚರ್ಚೆ ನಡೆಯಿತು.










