ಆಧುನಿಕ ಸೌಕರ್ಯದೊಂದಿಗೆ, ಉತ್ತಮ ಸೇವೆ: ಡಾ. ಮಂಜೂಷ ರೈ
ಅರಂತೋಡು ಪೇಟೆಯ ಮಲ್ಲಿಕಾ ಕಾಂಪ್ಲೆಕ್ಸ್ ನಲ್ಲಿ ಡಾ.ಮಂಜೂಷ ರೈ ಮಾಲಕತ್ವದ ವಜ್ರಭೀಮ್ ದಂತ ಚಿಕಿತ್ಸಾಲಯ ಶುಭಾರಂಭ ಶುಭಾರಂಭಗೊಂಡಿತು.

ಬೆಳಗ್ಗೆ ಗಣಪತಿ ಹವನ ನಡೆಯಿತು.















ಬಳಿಕ ಎಂ ಡಿ ಎಸ್ ಆರ್ಥೋ ಸ್ಪೆಷಲಿಸ್ಟ್ ಡಾ.ಮಹೇಶ್ ಕುಮಾರ್ ವೈ ರವರು ನೂತನ ಕ್ಲಿನಿಕ್ ನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು, ಬಳಿಕ
ವಜ್ರಭೀಮ್ ದಂತ ಚಿಕಿತ್ಸಾಲಯ ಉನ್ನತ ಮಟ್ಟದಲ್ಲಿ ಹೆಸರು ಮಾಡಲಿ ಎಂದು ಶುಭ ಹಾರೈಸಿದರು.

ಬಳಿಕ ಡಾ.ಮಹೇಶ್ ಕುಮಾರ್ ರವರನ್ನು ಪಂಚಾಯತ್ ಅಧ್ಯಕ್ಷ ಕೇಶವ ಆಡ್ತಲೆ ಸನ್ಮಾನಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಕೆ. ಅರ್.ಗಂಗಾಧರ್
ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ, ಶಿವಾನಂದ ಕುಕ್ಕುಂಬಳ, ಸಂತೋಷ್ ಕುತ್ತಮೊಟ್ಟೆ,
ಕೆ.ಆರ್.ಪದ್ಮನಾಭ,
ಕಟ್ಟಡ ಮೂಲಕ ನಿತ್ಯಾನಂದ ಚೆನ್ನಡ್ಕ, ಅಶ್ರಫ್ ಗುಂಡಿ,
ಸಿದ್ದಾರ್ಥ್ ಬೆಳ್ಳಾರೆ, ಡಾ.ಸುಮನ್, ಡಾ ಮಹೇಶ್ ಕುಮಾರ್, ಕುಟುಂಬದ ಸದಸ್ಯರಾದ
ಭರತ್ ಶೆಟ್ಟಿ, ಉಮಾ ಸುಂದರ ರೈ,
ಶಕುಂತಲಾ ರೈ, ಜಲಜ, ಲತಾ ಸಿ.ಏನ್. ಸತ್ಯ ಸೇರಿದಂತೆ ಗಣ್ಯರು ಹಾಜರಿದ್ದು ಶುಭ ಹಾರೈಸಿದರು.

ಗ್ರಾಮಾಂತರ ಪ್ರದೇಶದಲ್ಲಿ ಆಧುನಿಕ ಸ್ಪರ್ಶದೊಂದಿಗೆ ಜನರನ್ನು ನೋಡಿಕೊಂಡು ಉತ್ತಮ ಸೇವೆ ನೀಡುತ್ತೇವೆ.
ಈ ಭಾಗದ ಜನರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು.
ಹಾಗೆಯೇ 3 ವೈದ್ಯರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೋಮವಾರದಿಂದ ಆದಿತ್ಯವಾರ ಮಧ್ಯಾಹ್ನದವರಿಗೆ ನಮ್ಮ ಸೇವೆ ಲಭ್ಯವಿದೆ ಎಂದು ಡಾ.ಮಂಜೂಷ ರೈ ತಿಳಿಸಿ, ಸರ್ವರನ್ನು ವಂದಿಸಿದರು. ಭರತ್ ಶೆಟ್ಟಿ ಸ್ವಾಗತಿಸಿದರು.










