ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ನಿವೃತ್ತ ಅಂಚೆ ಪಾಲಕರಾದ ರಾಮ ಭಟ್ ಮಜಿಗುಂಡಿ ಯವರು ಜು.2 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 71 ವರ್ಷ ವಯಸ್ಸಾಗಿತ್ತು.















ಮೃತರು ಪತ್ನಿ ಶ್ರೀಮತಿ ವಿಜಯಕುಮಾರಿ,
ಇಬ್ಬರು ಪುತ್ರರಾದ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಗಣೇಶ್ ಭಟ್ ಮಜಿಗುಂಡಿ, ರವಿಪ್ರಕಾಶ್ ಮಜಿಗುಂಡಿ, ಸಹೋದರರಾದ ಈಶ್ವರ ಭಟ್ ಮಜಿಗುಂಡಿ, ಕೃಷ್ಣ ಭಟ್ ಬಾಯಾಡಿ, ಬಾಯಾಡಿ ವೆಂಕಟ್ರಮಣ ಭಟ್, ಹರಿಯಪ್ಪ ಭಟ್ ಮೂಡಬಿದ್ರೆ, ಸಹೋದರಿಯರಾದ ಶ್ರೀಮತಿ ತಿರುಮಲೇಶ್ವರೀ ಅಮ್ಮ ಮಜಿಗುಂಡಿ, ಶ್ರೀಮತಿ ಶಾರದಾ ದೇಲಂತಮಜಲು ,ಸೊಸೆಯಂದಿರಾದ ಶ್ರೀಮತಿ ರೂಪಾ ಗಣೇಶ್, ಶ್ರೀಮತಿ ಅನುಪಮಾರವಿಪ್ರಕಾಶ್ ಹಾಗೂ ಮೊಮ್ಮಕ್ಕಳನ್ನು ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.
ಇವರು ಕಳೆದ 35 ವರ್ಷಗಳಿಂದ ಅರಂಬೂರು ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಸ್ಥಳೀಯಶ್ರೀಮೂಕಾಂಬಿಕಾ ಭಜನಾ ಮಂದಿರದ ಸಕ್ರಿಯ ಸದಸ್ಯರಾಗಿದ್ದರು.










