ಕುಮಾರಧಾರ ಸ್ನಾನಘಟ್ಟ ನಿನ್ನೆ ರಾತ್ರಿಯಿಂದ ಮುಳುಗಡೆ
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಕಾರ ಮಳೆ ಮುಂದುವರಿದಿದ್ದು, ಜು.2 ರಾತ್ರಿ ವೇಳೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.
ಘಟ್ಟಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸದಲ್ಲಿ ಬಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ರಾತ್ರಿ ವೇಳೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದ್ದು, ಸ್ನಾನ ಘಟ್ಟ ಮುಳುಗಡೆಯಾಗಿ, ಲಗೇಜ್ ಕೊಠಡಿ ಬಳಿವರೆಗೆ ನದಿ ನೀರು ಆವರಿಸಿದೆ. ಇಂದು ಬೆಳಗ್ಗೆ ನೀರಿನ ಮಟ್ಟ ಅದೇ ಇರುವುದಾಗಿ ತಿಳಿದು ಬಂದಿದೆ.















ನದಿ ನೀರಿನ ಬಳಿಗೆ ಭಕ್ತರ ತೆರಳದಂತೆ ಸೂಚಿಸಲಾಗಿದೆ. ನದಿ ದಡದಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ನದಿ ನೀರಿಗೆ ಇಳಿದು ತೀರ್ಥ ಸ್ನಾನ ನೆರವೇರಿಸುವುದಕ್ಕೂ ನಿರ್ಬಂಧಿಸಲಾಗಿದೆ.










