ಭಾರತೀಯ ಭೂಸೇನೆಯ ಮಾಜಿ ಯೋಧ ನಿಧನ

0

ಮೃತ ದೇಹವನ್ನು ಪಾಲದಲ್ಲಿ ಸಾಗಿಸಿದರು

ತೂಗುಯ್ಯಾಲೆಯಲ್ಲಿ ಪ್ರಯಾಸದ ಪ್ರಯಾಣ

ಬಾಳುಗೋಡು ಗ್ರಾಮದವರಾಗಿದ್ದು ಭಾರತೀಯ ಭೂಸೇನೆಯ ನಿವೃತ್ತ ಯೋಧ ಧನಂಜಯ ಬಾಳುಗೋಡುರವರು
ಅಲ್ಪಕಾಲದ ಅಸೌಖ್ಯದಿಂದ ಜೂ. 2 ರಂದು ಮಂಗಳೂರಿನಲ್ಲಿ ನಿಧನರಾಗಿದ್ದರು‌

ಪ್ರಸ್ತುತ ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ನ ಗನ್ ಮನ್ ಆಗಿರುವ ಅವರ ಮೃತ ದೇಹವನ್ನು ಇಂದು ಬಾಳುಗೋಡಿನ ಅವರ ಮನೆಗೆ ತರಲಾಗಿತ್ತು. ಆದರೆ ಮನೆಗ ಬಳಿಯ ಲ್ಲಿರು ಹೊಳೆಯಲ್ಲಿ ಸಾಕಷ್ಟು ನೀರು ಹರಿವು ಇದ್ದ ಕಾರಣ ಹೊಳೆ ದಾಟುವ ವ್ಯವಸ್ಥೆ ಇಲ್ಲದಾಗಿತ್ತು. ಕೊನೆಯದಾಗಿ ಮಾಜಿ ಯೋಧನ ದೇಹವನ್ನು ಅಡಿಕೆ ಮರದ ಪಾಲದಲ್ಲಿ ಇಬ್ಬರೇ ಹಿಡಿದುಕೊಂಡು ಪಾಲ ಡಾಟಿಸಿ ಮನೆಗೆ ಕೊಂಡೊಯ್ದುರು. ಅಂತ್ಯಸಂಸ್ಕಾರ ವೇಳೆ ಮಾಜಿ ಸೈನಿಕರು ಗೌರವ ವಂದನೆ ಸಲ್ಲಿಸಿದರು. ಜನಪ್ರತಿನಿಧಿಗಳು, ಸ್ಥಳೀಯರು ಉಪಸ್ಥಿತರಿದ್ದರು,

ವರದಿ : ಕುಶಾಲಪ್ಪ ಕಾಂತುಕುಮೇರಿ