ಸುಳ್ಯ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ. ಟಿ. ಸುರೇಶ್ ಎಸ್ಐ ಆಗಿ ಮುಂಭಡ್ತಿ

0

ಉಪ್ಪಿನಂಗಡಿ ಟ್ರಾಫಿಕ್ ಠಾಣೆಗೆ ವರ್ಗಾವಣೆ

ಸುಳ್ಯ ಪೊಲೀಸ್ ಠಾಣೆಯಲ್ಲಿ ಎ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ ಟಿ ಸುರೇಶ್ ರವರು ಎಸ್ಐ ಆಗಿ ಮುಂಭಡ್ತಿ ಹೊಂದಿದ್ದು ಉಪ್ಪಿನಂಗಡಿ ಟ್ರಾಫಿಕ್ ಠಾಣೆಗೆ ಎಸ್ ಐ ಯಾಗಿ ವರ್ಗಾವಣೆ ಗೊಂಡಿರುತ್ತಾರೆ.

ಸುರೇಶ್ ರವರು ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ತನಿಯಪ್ಪ ಹಾಗೂ ಕಮಲ ದಂಪತಿಯ ಪುತ್ರರಾಗಿದ್ದು ಕಳೆದ 32 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ವೇಣೂರು,ಪುತ್ತೂರು ನಗರ, ಪುತ್ತೂರು ಗ್ರಾಮಾಂತರ, ಮಂಗಳೂರು ಊರ್ವ,ಉಪ್ಪಿನಂಗಡಿ, ನೆಲ್ಯಾಡಿ,ಕಡಬ,ಬೆಳ್ಳಾರೆ ಹಾಗೂ ಸುಳ್ಯ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.
ಸುರೇಶ್ ರವರ ಪತ್ನಿ ಎಂ ಲಕ್ಷ್ಮಿ ರವರು ಮಹಿಳಾ ಕಿರಿಯ ಆರೋಗ್ಯ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಹಿರಿಯ ಪುತ್ರ ಕೌಶಿಕ್ ಐಯರ್ಲ್ಯಾಂಡ್ ನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದು ಕಿರಿಯ ಪುತ್ರ ಕೃತಿಕ್ ರವರು ಮಂಗಳೂರು ಫಾದರ್ ಮುಲ್ಲಾರ್ ಮೆಡಿಕಲ್ ಕಾಲೇಜ್ ನಲ್ಲಿ ನರ್ಸಿಂಗ್ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.