ಚಂದನ ಸಾಹಿತ್ಯ ವೇದಿಕೆ ವತಿಯಿಂದ ಹಾಸ್ಯ ಕವನ ಸ್ಪರ್ಧೆ

0

ಸುಳ್ಯದ ಚಂದನ ಸಾಹಿತ್ಯ ವೇದಿಕೆ ವತಿಯಿಂದ ಹಾಸ್ಯ ಕವನ ಸ್ಪರ್ಧೆಯು ಇತ್ತೀಚೆಗೆ ಜರುಗಿತು . ಈ ಹಾಸ್ಯ ಕವನ ಸ್ಪರ್ಧೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಆವರು ವಹಿಸಿದ್ದರು.

ಹಾಸ್ಯ ಕವನ ಸ್ಪರ್ಧೆಯಲ್ಲಿ ಜ್ಯೋತಿಭಾ ಚಿಲ್ಲಣ್ಣವರ್ ಅವರ ಕಕ್ಕಾಬಿಕ್ಕಿ ಕವಿತೆ, ಅಪ್ಪಯ್ಯ ಯಾದವ್ ಬೆಂಗಳೂರು ಅವರ ಕಣ್ಣಿಲ್ಲದ ಕನ್ಯೆ, ಕೆ. ಎ. ಅಬ್ದುಲ್ ಅಝೀಝ್ ಪುಣಚ ಅವರ (ನೈ)(ಟೈ)ಟ್), ನಿಗುಢ ಹುಬ್ಬಳ್ಳಿ ಅವರ ಹೆಂಡ್ತಿ ಕಾಟ, ಗೋಪಾಲಕೃಷ್ಣ ಭಟ್ ಮನವಳಿಕೆ ಅವರ ಡುಮ್ಮಣ್ಣ, ಎಂ ಎ ಮುಸ್ತಫ ಬೆಳ್ಳಾರೆ ಅವರ ಗುಂಡನ ರೀತಿ, ಅನಿತಾ ಶೆನೈ ಮಂಗಳೂರು ಅವರ ಕವಿಯಲ್ಲ ಕಣೆ ಕಪಿ, ಎಚ್ ಭೀಮರಾವ್ ವಾಷ್ಠರ್ ಅವರ ಚಂದುಳ್ಳಿ ಚೆಲುವಿ, ಗಿರೀಶ್ ಪೆರಿಯಡ್ಕ ಉಪ್ಪಿನಂಗಡಿ ಅವರ ನನ್ನಾಕೆ ಮೇಕಪ್ ಗೆ ಬಿದ್ದೆ, ಪ್ರಭಾಕರ ಭಟ್ ಟಿ ಪೋಳ್ಯ ಪುತ್ತೂರು ಅವರ ನಾನೇ ರಂಭೆ, ಅನ್ಸಾರ್ ಕಾಟಿಪಳ್ಳ ದುಬೈ ಅವರ ವಿಡಂಬಣೆ, ಸುಮಂಗಲ ಲಕ್ಷ್ಮಣ ಕೋಳಿವಾಡ ಅವರ ಸ್ವರ್ಗಕ್ಕೆ ಸೀಖರಣೆ, ಹೈದರ್ ಆಲಿ ಐವತ್ತೊಕ್ಲು ಅವರ ಹಾಸ್ಯ ಚುಟುಕುಗಳು, ಹರೀಶ್ ಕಜೆ ಪುತ್ತೂರು ಅವರ ನನ್ನ ಹೆಂಡ್ತಿ ಬೈಗುಳ ಹಾಸ್ಯ ಕವನಗಳು ಮೂಡಿಬಂದವು. ಹಿರಿಯ ಸಾಹಿತಿಗಳಾದ ಶ್ರೀ ನಾರಾಯಣ ರೈ ಕುಕ್ಕುವಳ್ಳಿ ಅವರು ಎಲ್ಲ ಕವನಗಳ ವಿಮರ್ಶೆ ಮಾಡಿ ತಮ್ಮ ಅಧ್ಯಕ್ಷೀಯ ಭಾಷಣವನ್ನು ನೆರವೇರಿಸಿಕೊಟ್ಟರು. ಈ ಹಾಸ್ಯ ಕವನ ಸ್ಪರ್ಧೆಯ ಗೋಷ್ಠಿಯು ಅಂತರ್ಜಾಲದಲ್ಲಿ ನೆರವೇರಿರೋದು ವಿಶೇಷವಾಗಿದೆ.

ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ, ಸಾಹಿತಿ, ಚಿತ್ರನಿರ್ದೇಶಕರಾದ ಎಚ್ ಭೀಮರಾವ್ ವಾಷ್ಠರ್ ರವರು ಸರ್ವರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕವಯಿತ್ರಿ ಸುಮಂಗಲ ಲಕ್ಷ್ಮಣ್ ವಂದಿಸಿದರು.