ಆಲೆಟ್ಟಿ ಸರಕಾರಿ ಶಾಲೆಯ ಹಿರಿಯವಿದ್ಯಾರ್ಥಿಗಳಿಂದ ಶ್ರಮದಾನ

0

ಜು.13 ರಂದು ವರುಷದ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ

ಆಲೆಟ್ಟಿ (ನಾರ್ಕೋಡು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವರುಷದಶತಮಾನೋತ್ಸವ ಸಂಭ್ರಮಕ್ಕೆ
ಜು.13 ರಂದು ಚಾಲನೆ ದೊರೆಯಲಿದ್ದು ಪೂರ್ವ ಸಿದ್ಧತೆಯ ಅಂಗವಾಗಿ ಜು.6 ರಂದು ಹಿರಿಯ ವಿದ್ಯಾರ್ಥಿಗಳಿಂದ ಶ್ರಮದಾನವು ನಡೆಯಿತು.

ಬೆಳಗ್ಗೆ ಆರಂಭಗೊಂಡ ಶ್ರಮದಾನದಲ್ಲಿ‌ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡು ಶಾಲೆಯ ಆವರಣದಲ್ಲಿರುವ ಕಾಡು ಪೊದೆಗಳನ್ನು ಸ್ವಚ್ಚಗೊಳಿಸಿದರು. ರಂಗಮಂದಿರದ ಮುಂಭಾಗದಲ್ಲಿ ನಡೆಯಲಿರುವ ‌ಕಾರ್ಯಕ್ರಮಕ್ಕೆ ಮಳೆಯಿಂದ ಅಡಚಣೆಯಾಗದಂತೆ ಪೆಂಡಾಲ್ ನಿರ್ಮಿಸಲಾಯಿತು. ಮೈದಾನದಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಯಿತು.
ಮಳೆಯನ್ನು ಲೆಕ್ಕಿಸದೆ ಕಾರ್ಯಕ್ರಮದ ಅಚ್ಚು ಕಟ್ಟಾದ ವ್ಯವಸ್ಥೆಗೆ ಸಕಲ ಸಿದ್ಧತೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡರು.
ಶ್ರಮದಾನದಲ್ಲಿ ಭಾಗವಹಿಸಿದವರಿಗೆ ಊಟ ಉಪಹಾರದ ವ್ಯವಸ್ಥೆ ಮಾಡಲಾಯಿತು. ಶಾಲಾ ಶತಮಾನೋತ್ಸವ‌ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಶಾಂತ್ ಕೋಲ್ಚಾರು, ಮುಖ್ಯ ಶಿಕ್ಷಕಿ ಸುನಂದ ಜಿ, ‌ಸಮಿತಿ ಸಂಚಾಲಕ ಚಂದ್ರಕಾಂತ ನಾರ್ಕೋಡು, ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಚಂದ್ರ ಏಣಾವರ
ಹಾಗೂಸಮಿತಿಯಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ಶಿಕ್ಷಕರು,
ಎಸ್.ಡಿ.ಎಂ.ಸಿ ಸದಸ್ಯರು,ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು ಸಹಕರಿಸಿದರು.