ಕೇರ್ಪಳ ಪಯಸ್ವಿನಿ ಯುವಕ ಮಂಡಲ ಮಹಾಸಭೆ

0

ಅಧ್ಯಕ್ಷರಾಗಿ ವಿನ್ಯಾಸ್ ಕುರುಂಜಿ ಆಯ್ಕೆ

ಸುಳ್ಯ ಕೇರ್ಪಳ ಪಯಸ್ವಿನಿ ಯುವಕ ಮಂಡಲ ಇದರ ವಾರ್ಷಿಕ ಮಹಾಸಭೆಯು ಜು.6ರಂದು‌ ಕೇರ್ಪಳ ಶಾಲಾ ವಠಾರದಲ್ಲಿ ನಡೆಯಿತು.

ಯುವಕ ಮಂಡಲದ ಅಧ್ಯಕ್ಷ ಭರತ್ ಕುರುಂಜಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕಾರ್ಯದರ್ಶಿ ಹೇಮಪ್ರಕಾಶ್ ಕುಂತಿನಡ್ಕ ವರದಿ ವಾಚಿಸಿದರೆ, ಕೋಶಾಧಿಕಾರಿ ಸುಶಾಂತ್ ಕೇರ್ಪಳ ಲೆಕ್ಕಪತ್ರ ಮಂಡಿಸಿದರು.

ಯುವಜನ ಸಂಯುಕ್ತ ಮಂಡಳಿ ಮಾಜಿ ಅಧ್ಯಕ್ಷ ದಯಾನಂದ ಕೇರ್ಪಳ, ನಿರ್ದೇಶಕ ಶಿವಪ್ರಸಾದ್ ಕೇರ್ಪಳ ವೇದಿಕೆಯಲ್ಲಿ ಇದ್ದರು.

ನೂತನ ಸಮಿತಿ : 2025-26ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಇದೇ ಸಂದರ್ಭ ನಡೆಯಿತು.

ಗೌರವಾಧ್ಯಕ್ಷರಾಗಿ ಭರತ್ ಕುರುಂಜಿ, ಅಧ್ಯಕ್ಷರಾಗಿ ವಿನ್ಯಾಸ್ ಕುರುಂಜಿ, ಉಪಾಧ್ಯಕ್ಷರುಗಳಾಗಿ ಸುಶಾಂತ್, ದಿನೇಶ್ ದೇವರಕಳಿಯ, ತೀರ್ಥರಾಮ ಕುದ್ಪಾಜೆ, ಪ್ರಧಾನ ಕಾರ್ಯದರ್ಶಿ ಯಾಗಿ ಅಜಿತ್ ಕುರುಂಜಿ, ಕೋಶಾಧಿಕಾರಿಯಾಗಿ ನಾಗರಾಜ ಕೇರ್ಪಳ, ಜೊತೆಕಾರ್ಯದರ್ಶಿಯಾಗಿ ಸುಹಾಸ್ ಕೇರ್ಪಳ, ಕ್ರೀಡಾ ಕಾರ್ಯದರ್ಶಿಯಾಗಿ ಜಿತೇಶ್ ಕೊಡೆಂಚಿಕ್ಕಾರ್ (ಭಸ್ಮಡ್ಕ), ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ ಜಯಪ್ರಸಾದ್ ಗುಡ್ಡೆಮನೆ,
ಸಂಘಟನಾ ಕಾರ್ಯದರ್ಶಿಯಾಗಿ ಯತೀಶ್ ಕೇರ್ಪಳ, ಅಜಿತ್ ಕೆ.ಸಿ., ದಿತೇಶ್ ರಾವ್ ಕೇರ್ಪಳ, ಪತ್ರಿಕಾ ಪ್ರತಿನಿಧಿ ರಘುರಾಮ ಕೇರ್ಪಳ

ನಿರ್ದೇಶಕರುಗಳಾಗಿ ಜಯಪ್ರಕಾಶ್ ರಾವ್ ಕೇರ್ಪಳ, ಅಭಿಷೇಕ್ ಕುರುಂಜಿಭಾಗ್, ದಿತೇಶ್ ಕೇರ್ಪಳ, ಜನಾರ್ದನ ನಾಯ್ಕ್,ಹೇಮ್‌ ಪ್ರಕಾಶ್ ಕುಂತಿನಡ್ಡ, ಮಹೇಶ್ ಗಾಂಧಿನಗರ, ಅನಿಲ್ ಯು.ಯಂ. ಶ್ರೀಧರ ಭಸ್ಮಡ್ಕ, ಸುನಿಲ್ ಕುರುಂಜಿಗುಡ್ಡೆ, ಅರುಣ್ ಕೇರ್ಪಳ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಯುವಕ ಮಂಡಲದ‌ ಮಾಜಿ ಅಧ್ಯಕ್ಷರುಗಳನ್ನು ಆಯ್ಕೆ ಮಾಡಲಾಯಿತು.