ರಸ್ತೆಬದಿ ಕಸ ಬಿಸುಟವರನ್ನು ಅಡ್ಡಗಟ್ಟಿ ಹಿಡಿದ ಅಧ್ಯಕ್ಷೆ

0

ಬೆಳ್ಳಂಬೆಳಗ್ಗೆ ಸುಳ್ಯ ನಗರದ ರಸ್ತೆಬದಿ ಕಸ ತಂದು ಹಾಕಿದ ವ್ಯಕ್ತಿಯೊಬ್ಬರನ್ನು ನ.ಪಂ. ಅಧ್ಯಕ್ಷರು ಅಡ್ಡಗಟ್ಟಿ ಹಿಡಿದು ಅವರಿಂದಲೇ ಕಸ ತೆಗೆಸಿದ ಘಟನೆ ವರದಿಯಾಗಿದೆ.
ನಿನ್ನೆ ಮುಂಜಾನೆ ನ.ಪಂ.ಅಧ್ಯಕ್ಷೆ ಶಶಿಕಲಾರವರು ತಮ್ಮ ಸ್ಕೂಟಿಯಲ್ಲಿ ಸುಳ್ಯಕ್ಕೆ ಬಂದಿದ್ದರು. ಅವರು ಜ್ಯೋತಿ ಸರ್ಕಲ್ ಬಳಿಗೆ ಬರುತ್ತಿರುವಾಗ ದೂರದಲ್ಲಿ , ಸ್ಕೂಟಿಯಲ್ಲಿ ಬಂದ ಯುವತಿಯೊಬ್ಬರು ತನ್ನಲ್ಲಿದ್ದ ಕಸದ ಕಟ್ಟನ್ನು ರಸ್ತೆಬದಿಯಲ್ಲಿ ಹಾಕುತ್ತಿರುವುದು ಕಂಡಿತು. ಕೂಡಲೇ ಅಧ್ಯಕ್ಷರು ತನ್ನ ವಾಹನದ ವೇಗವನ್ನು ಹೆಚ್ಚಿಸಿ ಮುಂದಕ್ಕೆ ಬಂದು ಕಸ ಬಿಸಾಡಿದ ಯುವತಿಯ ಸ್ಕೂಟಿಗೆ ಅಡ್ಡ ಇಟ್ಟರಲ್ಲದೆ ಅವರನ್ನು ತೀವ್ರವಾಗಿ ತರಾಟೆಗೆತ್ತಿಕೊಂಡರು.

ತಕ್ಷಣವೇ ಕಸದ ಚೀಲವನ್ನು ಅಲ್ಲಿಂದ ತೆಗೆದು ಹಸಿಕಸ ಒಣಕಸ ಬೇರ್ಪಡಿಸಿ ನಗರ ಪಂಚಾಯತ್ ನೆದುರು ಇರಿಸುವಂತೆ ತಾಕೀತು ಮಾಡಿದರು. ಅಧ್ಯಕ್ಷರ ಕೈಯಲ್ಲಿ ಸಿಕ್ಕಿಬಿದ್ದಿದ್ದ ಯುವತಿ ಬೇರೆ ದಾರಿ ಕಾಣದೆ ತಾನು ಬಿಸಾಡಿದ್ದ ಕಸದ ಚೀಲವನ್ನು ಮತ್ತೆ ಎತ್ತಿಕೊಂಡು ಸ್ಕೂಟಿಯಲ್ಲಿ ಕೊಂಡೊಯ್ದು ನ.ಪಂ. ಎದುರುಗಡೆ ಇರಿಸಿದರೆಂದು ತಿಳಿದುಬಂದಿದೆ. ಹಸಿಕಸ ಒಣಕಸ ಬೇರ್ಪಡಿಸಿ ಇರಿಸಿದರೇ ಎಂದು ತಿಳಿದುಬಂದಿಲ್ಲ. ಅಧ್ಯಕ್ಷರು ಅವರ ಮೇಲೆ ದಂಡ ವಿಧಿಸಿಲ್ಲ.