ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಅಭಿಪ್ರಾಯ ಸಂಗ್ರಹಿಸಿ ತೆರಳಿದ ಕೆಪಿಸಿಸಿ ಮುಖಂಡರು

0

ಇದು ನಾಯಕರ ಭಿನ್ನಮತವಲ್ಲ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ: ವೀಕ್ಷಕರಿಂದ ಪತ್ರಿಕಾಗೋಷ್ಠಿ

ಕೆ ಪಿ ಸಿ ಸಿ ವೀಕ್ಷಕರಿಂದ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ಕುರಿತ ಸ್ಥಳೀಯ ನಾಯಕರ ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆ ಜು 8 ರಂದು ಬೆಳಿಗ್ಗೆ 11.30 ಕ್ಕೆ ಆರಂಭ ಗೊಂಡು ಸಂಜೆ 3.30.ರವರೆಗೆ ನಡೆದು ಅಂತಿಮ ವಾಗಿ ನೂರಾರು ನಾಯಕರುಗಳ ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ವಿವರಗಳನ್ನೊಳಗೊಂಡ ಮಾಹಿತಿ ಯೊಂದಿಗೆ ತೆರಳಿದ್ದಾರೆ.


ಮುಂದೆ ಸುಳ್ಯಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ವೀಕ್ಷಕರ ಬ್ಯಾಗಿನಲ್ಲಿ ಕೆ ಪಿ ಸಿ ಸಿ ಅಧ್ಯಕ್ಷರ ಬಳಿಗೆ ತೆರಳಿ ಬಳಿಕ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಹೆಸರು ಘೋಷಣೆ ಯಾಗಲಿದೆ.

ಒಟ್ಟಿನಲ್ಲಿ ಇಂದು ಬೆಳಿಗ್ಗೆ ಯಿಂದ ಸಂಜೆ ವರೆಗೆ ಸುಳ್ಯ ಸದರ್ನ್ ಹೋಟೆಲ್ ಬಳಿ ವೀಕ್ಷಕರ ಆಗಮನದಿಂದ ಕಾಂಗ್ರೆಸ್ ಪಕ್ಷದ ನಾಯಕರುಗಳ ಮತ್ತು ಕಾರ್ಯಕರ್ತರ ದೊಡ್ಡ ಬೀಡೇ ಜಮಾಯಿಸಿದಂತೆ ಆಗಿ ಸೇರಿದವರಲ್ಲಿ ಮುಂದಿನ ನಮ್ಮ ಅಧ್ಯಕ್ಷರು ಯಾರು ಎಂಬ ಬಗ್ಗೆ ಕುತೂಹಲ ಭರಿತ ಪ್ರಶ್ನೆ ಗಳು ಮತ್ತು ವಿಶ್ವಾಸಭರಿತ ಮಾತಿನ ಚರ್ಚಾ ಜಾಗ ವಾಗಿ ಕಂಡು ಬಂದಿತು.

ಸಂಜೆ ಅಭಿಪ್ರಾಯ ಸಂಗ್ರಹ ಬಳಿಕ ಪತ್ರಿಕಾ ಗೋಷ್ಠಿ ನಡೆಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ವೀಕ್ಷಕರುಗಳಾದ ಎಂ. ನಾರಾಯಣ ಸ್ವಾಮಿ ಇದು ಸುಳ್ಯ ಕಾಂಗ್ರೆಸ್ ನಾಯಕರುಗಳ ಬಂಡಾಯ ದಿಂದ ಈ ಅಭಿಪ್ರಾಯ ಸಂಗ್ರಹ ಸಭೆ ಆದದಲ್ಲ ಇದು ನಮ್ಮ ಪಕ್ಷದ ಕಾರ್ಯಕರ್ತರ ಮತ್ತು ನಾಯಕರ ಕೋರಿಕೆ ಮೇರೆಗೆ ಆದ ಅಭಿಪ್ರಾಯ ಸಂಗ್ರಹ ಸಭೆ. ಈ ಒಂದು ಕಾರ್ಯಕ್ರಮದಿಂದ ಸುಳ್ಯ ದಲ್ಲಿ ಪಕ್ಷಕ್ಕೆ ಒಳ್ಳೆಯ ಒಂದು ಬಲ ಬಂದಂತಾಗಿದೆ.


ಕಾರ್ಯಕರ್ತರನ್ನು ಮತ್ತು ಪಕ್ಷದ ನಾಯಕರನ್ನು ಒಟ್ಟು ಸೇರಿಸುವ ಒಂದು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ಎಲ್ಲಾ ಪಕ್ಷ ಗಳಲ್ಲಿಯೂ ವೈ ಮನಸ್ಸು ಬಿನ್ನಾಭಿಪ್ರಾಯಗಳು ಸಹಜ.ಅದನ್ನು ಸರಿ ಪಡಿಸಲು ನಮಗೆ ಕೆ ಪಿ ಸಿ ಸಿ ಅಧ್ಯಕ್ಷರು ಸೂಚಿಸಿದ್ದು ಆ ಕೆಲಸವನ್ನು ನಾವು ಇಲ್ಲಿ ಮಾಡಲು ಬಂದಿದ್ದೇವೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಡಿಸಿಸಿ ಅಧ್ಯಕ್ಷ ಹರೀಶ್‌ ಕುಮಾರ್, ಪುತ್ತೂರು ಶಾಸಕ ಅಶೋಕ್ ಕುಮಾ‌ರ್ ರೈ,ವೀಕ್ಷಕರು ಗಳಾದ ಶ್ರೀಮತಿ ಮಮತಾ ಗಟ್ಟಿ, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಹಿದ್ ತೆಕ್ಕಿಲ್, ಜಿ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಉಪಸ್ಥಿತರಿದ್ದರು.