ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಗಳ ಪೋಷಕ ಸಮಿತಿಗಳಿಗೆ ನೂತನ ಉಪಾಧ್ಯಕ್ಷರುಗಳ ಆಯ್ಕೆ

0

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಗಳ ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪೋಷಕ ಪ್ರತಿನಿಧಿಗಳ ಸಭೆ ಜು.8ರಂದು ಸಂಸ್ಥೆಯಲ್ಲಿ ನಡೆಯಿತು.

ಶಾಲಾ ಮುಖ್ಯ ಶಿಕ್ಷಕಿ ಸಿ. ಮೇರಿ ಸ್ಟೆಲ್ಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಶಿಕ್ಷಕ ಪ್ರತಿನಿಧಿ ಶ್ರೀಮತಿ ಉಷಾದೇವಿ ಎಂ. ಎಸ್ ಹಾಗೂ ಪ್ರಾಥಮಿಕ ವಿಭಾಗದ ಶಿಕ್ಷಕ ಪ್ರತಿನಿಧಿ ಶ್ರೀಮತಿ ಭವ್ಯ ಪಿ.ಜಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪೋಷಕ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.

ಪೋಷಕ ಸಮಿತಿಗೆ ಉಪಾಧ್ಯಕ್ಷರುಗಳ ಆಯ್ಕೆ

ಇದೇ ಸಂದರ್ಭ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ಪೋಷಕ ಸಮಿತಿಯ ಉಪಾಧ್ಯಕ್ಷರುಗಳ ಆಯ್ಕೆ ನಡೆಯಿತು. ಪೂರ್ವ ಪ್ರಾಥಮಿಕ ವಿಭಾಗದ ಪೋಷಕ ಸಮಿತಿಯ ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಜಯನಗರ, ಪ್ರಾಥಮಿಕ ಶಾಲಾ ವಿಭಾಗದ ಪೋಷಕ ಸಮಿತಿಯ ಉಪಾಧ್ಯಕ್ಷರಾಗಿ ಶ್ರೀಮತಿ ಸುನಿತಾ ಮೊoತೆರೊ, ಪ್ರೌಢಶಾಲಾ ವಿಭಾಗದ ಪೋಷಕ ಸಮಿತಿಯ ಉಪಾಧ್ಯಕ್ಷರಾಗಿ ಶ್ರೀಮತಿ ಸುಮಲತಾ ಪಿ.ವಿ. ಸರ್ವಾನುಮತದಿಂದ ಆಯ್ಕೆಗೊಂಡರು. ನೂತನವಾಗಿ ಆಯ್ಕೆಯಾದ ಉಪಾಧ್ಯಕ್ಷರುಗಳಿಗೆ ಶಾಲಾ ಮುಖ್ಯ ಶಿಕ್ಷಕಿ ಸಿ. ಮೇರಿ ಸ್ಟೆಲ್ಲಾ ಗುಲಾಬಿ ಹೂ ನೀಡಿ ಅಭಿನಂದಿಸಿದರು.