ಜುಲೈ 13 : ಬೆಳ್ಳಿಪ್ಪಾಡಿಯಲ್ಲಿ ಕೆಸರ್ ಡೊಂಜಿದಿನ

0

ದೇಲಂಪಾಡಿ ಗ್ರಾಮದ ಶಕ್ತಿ ಯುವಕ ಮಂಡಲ ಬೆಳ್ಳಿಪ್ಪಾಡಿ ಹಾಗೂ ಊರಿನ ಎಲ್ಲ ಸಂಘಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜುಲೈ 13 ರಂದು ಬನಾರಿ ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಕಲಾ ಮಂದಿರದಿಂದ 150 ಮೀಟರ್ ದೂರದಲ್ಲಿ ರುವ ಶ್ರೀ ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಇವರ ಗದ್ದೆಯಲ್ಲಿ ಕೆಸರಗದ್ದೆ ಕ್ರೀಡಾ ಕೂಟ ನಡೆಯಲಿದೆ.

ಬೆಳಿಗ್ಗೆ ಗಂಟೆ 9.00 ರಿಂದ ಸಂಜೆ ಯವರಿಗೆ ವಿವಿಧ ಆಟೋಟ ಸ್ಪರ್ಧೆ ಗಳು ನಡೆಯಲಿದ್ದು ಜಯರಾಜ್ ಬಿ. ಎಚ್ ಅಧ್ಯಕ್ಷತೆ ವಹಿಸಲಿದ್ದಾರೆ. ಕೆ ಜನಾಧ೯ನ ನಾಯಕ್ ಕೋಟಿ ಗದ್ದೆ ಇವರು ಕಾಯ೯ಕ್ರ ಮವನ್ನು ಉದ್ಘಾಟಿಸಲಿದ್ದಾರೆ.
ಅತಿಥಿಗಳಾಗಿ ಪ್ರಸಾದ್ ಕಾಟೂರು ಹಾಗೂ ವಸಂತ ಅಡೂರು ಭಾಗವಹಿಸಲಿದ್ದಾರೆ.

ವಿಶೇಷ ಆಕರ್ಷಣೆಯಾಗಿ ಧರ್ಮ ಚಾವಡಿ ಚಿತ್ರ ತಂಡವು ಕಾರ್ಯಕ್ರಮಕ್ಕೆ ಆಗಮಿಸಲಿದ್ದು ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

(ವರದಿ :ವೆಂಕಟೇಶ್ ಬೆಳ್ಳಿಪ್ಪಾಡಿ ಅಮ್ಮಾಜಿಮೂಲೆ)