ಬಾಳಿಲ ಗ್ರಾಮದ ಅಗಲ್ಪಾಡಿ ಎಂಬಲ್ಲಿ ರಾಜ್ಯರಸ್ತೆಯ ಬದಿ ಕುಸಿದಿದ್ದು, ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ.
ಪೈಪ್ ಲೈನ್ ಅಳವಡಿಸುವವರಿಂದ ರಸ್ತೆಯ ಬದಿಯಲ್ಲಿ ಆಳವಾಗಿ ಹೊಂಡ ನಿರ್ಮಾಣವಾಗಿದ್ದು, ಇದೀಗ ಮಳೆಗೆ ಮಣ್ಣು ಸಡಿಲಗೊಂಡು ಜರಿದು ಹೋಗಿದೆ.















ಪಕ್ಕದಲ್ಲೇ ಕೆರೆ ಇದ್ದು, ಮಳೆಗಾಲವಾದ್ದರಿಂದ ಕೆರೆ ತುಂಬಾ ನೀರು ತುಂಬಿಕೊಂಡಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.










