ಮನೆಯೆ ಮೊದಲ ಪಾಠಶಾಲೆ
ಜನನಿ ತಾನೆ ಮೊದಲ ಗುರುವು
ಜನನಿಯಿಂದ ನಾನು ಇಂದು
ಜನನಿ ಗಾಗಿ ನನ್ನ ಒಲವು!
ಮನೆಯೆ ಮೊದಲ ಘಟಕವು
ಬಾಳಿನೊಲುಮೆಯ ನಾವೆಯು
ಜನನಿಯಂತೆ ಗುರುವು ಸಿಗಲು
ದೊರೆವುದಣ್ಣ ಮುಕುತಿಯು!








ಮುಂದೆ ಗುರಿಯು, ಹಿಂದೆ ಗುರುವು
ಇದ್ದರೊಡನೆ ಯುಕ್ತಿ ಬಲವು
ದೊರೆತರಂತು ಜ್ಞಾನದರಿವು
ದೈವಕೃಪೆಯೇ ಶಕ್ತಿಯು!
ಜಗದೊಳಿರುವ ಮಹಿಮರೆಲ್ಲರೂ
ಗುರುವಿನಿಂದಲೆ ಕಲಿತರು
ಗುರುವಿಗೆಂದೂ ಗುರುವೇ ಸಾಟಿ
ಗುರುವೇ ನನ್ನ ಒಲವು -ಗೆಲುವು!
- ಶ್ರೀಮತಿ ಸರಿತಾ ಪ್ರವೀಣ್
ರೋಟರಿ ಪದವಿಪೂರ್ವ ಕಾಲೇಜು ಸುಳ್ಯ










