ರೋಟರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಸುಳ್ಯ ಇಲ್ಲಿಯ ಜೂನಿಯರ್ ರೆಡ್ ಕ್ರಾಸ್ ಘಟಕ ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗದ ಸಹಕಾರದೊಂದಿಗೆ ‘ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ’ವು ಜುಲೈ 13ನೇ ಆದಿತ್ಯವಾರ ಸುಳ್ಯ ರಥಬೀದಿಯಲ್ಲಿರುವ ರೋಟರಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ.








ಮೊದಲು ಬಂದ 150ಜನರಿಗೆ ಮೊದಲ ಆದ್ಯತೆಯಾಗಿದ್ದು ಮುಂಗಡ ಟೋಕನ್ ಇರುವುದಿಲ್ಲ. ಜನ್ಮದಿನ ಬದಲಾವಣೆಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ ಅಥವಾ ಪಾಸ್ಪೋರ್ಟ್, ಹೆಸರು ಬದಲಾವಣೆಗೆ ಪಾಸ್ಪೋರ್ಟ್ ಸೈಜ್ ಫೋಟೋ, ಪಾನ್ ಕಾರ್ಡ್, ಅಂಕಪಟ್ಟಿ, ಪಡಿತರ ಗುರುತಿನ ಚೀಟಿ, ಮತದಾರ ಗುರುತಿನ ಚೀಟಿ ಅಥವಾ ಜನನ ಪ್ರಮಾಣ ಪತ್ರ; ವಿಳಾಸ ಬದಲಾವಣೆಗೆ ಪಂಚಾಯತ್ ವಿಳಾಸ ದೃಡೀಕರಣ ಪತ್ರ, ಪಡಿತರ ಚೀಟಿ, ತಹಸೀಲ್ದಾರ್ ಅಥವಾ ಗೆಜೆಟೆಡ್ ಆಫೀಸರ್ ಸರ್ಟಿಫಿಕೇಟ್ ಮುಂತಾದ ದಾಖಲೆಗಳನ್ನು ಸಲ್ಲಿಸಬೇಕು. ಹೊಸ ಆಧಾರ್ ನೋಂದಣಿ ಮಾಡುವುದಾದರೆ 18 ವರ್ಷದ ಕೆಳಗಿನವರಿಗೆ ಮಾತ್ರ ಅವಕಾಶವಿದ್ದು ಅವರು ಸಲ್ಲಿಸಬೇಕಾದ ದಾಖಲೆಗಳು ಎಸ್‍ಎಲ್‍ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ವಾಸ್ತವ್ಯ ದೃಢೀಕರಣ ಪತ್ರ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ರೋಟರಿ ವಿದ್ಯಾ ಸಂಸ್ಥೆ ಪ್ರಕಟಣೆ ತಿಳಿಸಿದೆ.










