ವಳಲಂಬೆ ಶಾಲೆಯಲ್ಲಿ ಉಚಿತ ಯಕ್ಷಗಾನ ತರಗತಿ ಆರಂಭ

0

ವಳಲಂಬೆ ಸ. ಹಿ. ಪ್ರಾ. ಶಾಲೆಯಲ್ಲಿ ಉಚಿತ ಯಕ್ಷಗಾನ ತರಗತಿಯನ್ನು ಯಕ್ಷಗಾನ ಗುರುಗಳಾಗಿರುವ ಕೋಡ್ಲ ಗಣಪತಿ ಭಟ್ ಇವರು ಜು.9 ರಂದು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಉಚಿತವಾಗಿ ತರಬೇತಿಯನ್ನು ನೀಡುವುದರೊಂದಿಗೆ ಯಕ್ಷಗಾನವನ್ನು ಉಳಿಸಿ ಬೆಳೆಸುವ ಉದ್ದೇಶದೊಂದಿಗೆ ಯಕ್ಷಗಾನದ ಮಹತ್ವವನ್ನು ತಿಳಿಸಿದರು. ಉಚಿತ ಯಕ್ಷಗಾನ ತರಬೇತಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಎಸ್ ಡಿ ಎಂ ಸಿ ಸದ್ಯಸ ರಾದ ನಳಿನಾಕ್ಷಿ ಪಿ ಎಸ್,ರೇವತಿ, ಚೈತ್ರ,ಮುಖ್ಯ ಗುರುಗಳು ತೃಪ್ತಿ ಕೆ ಪಿ ಶಿಕ್ಷಕರಾದ ತೇಜಾವತಿ ಎಂ, ಅಪೂರ್ವ ಕೆ ಉಪಸ್ಥಿತಿದ್ದರು.