ಜು.13 ರಂದು ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ರಚನೆ
ನಾಲ್ಕೂರು ಗ್ರಾಮದ ನಡುಗಲ್ಲಿನಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ನೂತನ ಕ್ಷೇತ್ರ
ಶ್ರೀ ಮಹಾ ಮೃತ್ಯುಂಜಯೇಶ್ವರ ಮತ್ತು ಶ್ರೀ ಪಾರ್ವತಿ ಕ್ಷೇತ್ರದಲ್ಲಿ ಊರಿನ ಸಮಸ್ತ ಬಾಂಧವರ ಸಭೆಯನ್ನು ಜು. 13 ರಂದು ಕರೆಯಲಾಗಿದ್ದು ಜೀರ್ಣೋದ್ಧಾರ ಸಮಿತಿ, ಮಾತೆಯರ ಸಮಿತಿ, ತರುಣರ ಸಮಿತಿ ಗಳನ್ನು ರಚಿಸಲಿದ್ದಾರೆ.








ಸಭೆಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡಿರುವ ವಿಚಾರ, ಟ್ರಸ್ಟ್ ನ ರಚನೆ ಕಾರ್ಯಯೋಜನೆ, ದೇವಾಲಯದ ನಿರ್ಮಾಣದ ಬಗೆಗಿನ ಇತರ ವಿಚಾರಗಳು ಚರ್ಚಿಸಲಾಗುವುದು. ಕ್ಷೇತ್ರ ನಿರ್ಮಾಣದ ವಿಚಾರದಲ್ಲಿ ಮುಂದುವರೆಯಲು ಬೇಕಾದ ಎಲ್ಲಾ ವಿಷಯಗಳನ್ನು ಚರ್ಚಿಸಲಿಸಲಾಗುವುದು. ಹಾಗೂ ಜೀರ್ಣೋದ್ಧಾರ ಸಮಿತಿ, ಮಾತೆಯರ ಸಮಿತಿ, ತರುಣರ ಸಮಿತಿ ಗಳನ್ನು ರಚನೆಯೂ ನಡೆಯಲಿದ್ದು.
ಗ್ರಾಮದ ಮತ್ತು ಸಾರ್ವಜನಿಕ ಬಂದು ಬಾಂಧವರು ಜವಾಹಾರ್ ಯುವಕ ಮಂಡಲ ನಡುಗಲ್ಲು ಇದರ ಸಭಾಂಗಣದಲ್ಲಿ ಬೆಳಗೆ 10.00 ಗಂಟೆ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಟ್ರಸ್ಟ್ ವತಿಯಿಂದ ಕೇಳಿಕೊಳ್ಳಲಾಗಿದೆ.










