ಪಂಜ:ದಿ.ಪ್ರೇಮಾನಂದ ಶೆಟ್ಟಿಯವರಿಗೆ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ವತಿಯಿಂದ ನುಡಿ ನಮನ ಕಾರ್ಯಕ್ರಮ

0

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪಂಜ ವಲಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ದಿ. ಪ್ರೇಮಾನಂದ ಶೆಟ್ಟಿ ಮುಂಡಾಳಗುತ್ತು -ಪಲ್ಲೋಡಿ ತಳಮನೆ ಯವರಿಗೆ ನುಡಿ ನಮನ ಕಾರ್ಯಕ್ರಮವು ಪಂಜ ಲಯನ್ಸ್ ಕ್ಲಬ್ ನ ಸಭಾಭವನದಲ್ಲಿ ಜು. 6 ರಂದು ನಡೆಯಿತು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸುಳ್ಯ ತಾಲೂಕು ನಿಕಟ ಪೂರ್ವ ಅಧ್ಯಕ್ಷರಾದ ವಿಶ್ವನಾಥ ರೈಯವರು ನುಡಿ ನಮನ ಸಲ್ಲಿಸಿದರು. ಐವತ್ತೊಕ್ಲು ಘಟ ಸಮಿತಿ ಅಧ್ಯಕ್ಷರಾದ ದುರ್ಗ ಕುಮಾರ್ , ವಲಯ ಸಮಿತಿ ಅಧ್ಯಕ್ಷರಾದ ವಿನೋದ್ ಬೊಳ್ಮಲೆ, ಶ್ರೀ ಶಾರದಾಂಬಾ ಭಜನಾ ಮಂಡಳಿ ನಿಕಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ , ದೇವದಾಸ ರೈ ಕೆಬ್ಲಾಡಿ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ್ ಪಲ್ಲೋಡಿ ,ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಸೋಮಪ್ಪ ನಾಯ್ಕ್, ಸುನಿಲ್ ಬಲ್ಕಡಿ ಹಾಗೂ ಪಂಜ ವಲಯದ ಸೇವಾ ದೀಕ್ಷಿತರು ಘಟಕ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಯೋಜಕರಾದ ಜಯಶ್ರೀ ಸ್ವಾಗತಿಸಿದರು.ಕಡಬ ತಾಲೂಕಿನ ಮೇಲ್ವಿಚಾರಕರಾದ
ಕಾವ್ಯಲಕ್ಷ್ಮಿ ನಿರೂಪಿಸಿದರು. ಸೇವಾ ದೀಕ್ಷಿತೆ ಕಾವೇರಿ ವಂದಿಸಿದರು.