ಅರಂಬೂರಿನಲ್ಲಿ ಅರಂತೋಡು ಎನ್.ಎಂ.ಪಿ.ಯು ಕಲಾ ಸಂಘದ ವಿದ್ಯಾರ್ಥಿಗಳಿಂದ ” ಕಂಡ ಡೊಂಜಿ ದಿನ” ಕಾರ್ಯಕ್ರಮ

0

ಅರಂತೋಡು ನೆಹರೂ ಸ್ಮಾರಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಸಂಸ್ಥೆಯ ಕಲಾ ಸಂಘದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ “ಕಂಡ ಡೊಂಜಿ ದಿನ” ಕಾರ್ಯಕ್ರಮವು ಅರಂಬೂರಿನ ಗದ್ದೆಯಲ್ಲಿ ಜುಲೈ 12 ರಂದು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಗದ್ದೆಯ ಮಾಲಕರಾದ ಉದಯಕುಮಾರ್ ಮತ್ತು ಮಹೇಶ್ ಅವರು ದೀಪ ಪ್ರಜ್ವಲನೆ ಮಾಡಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಾಲೇಜು ಉಪನ್ಯಾಸಕರುಗಳಾದ ಪದ್ಮಕುಮಾರ್ ಚಂದ್ರ ಶೇಖರ್ , ಶ್ರೀಮತಿ ನಂದಿನಿ, ಶ್ರೀಮತಿ ಶಾಂತಿ, ಶ್ರೀಮತಿ ಸೌಮ್ಯ, ಕಲಾ ವಿಭಾಗದ ಸಂಘದ ಅಧ್ಯಕ್ಷ ಯಶ್ವಿನ್ , ಸಂಸ್ಥೆಯ ವಿದ್ಯಾರ್ಥಿಗಳು, ಊರಿನ ಹಿರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು

ಕಾಲೇಜು ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ಸರ್ವರನ್ನು ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಚಂದ್ರ ಶೇಖರ ವಂದಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ನೃತ್ಯ, ನೇಜಿ ನೆಡುವುದು, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು , ಮನೋರಂಜನಾ ಕಾರ್ಯಕ್ರಮ ನಡೆಯಿತು.