ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯಲ್ಲಿ ಅರುಣ್ ರಂಗತ್ತಮಲೆಯವರಿಗೆ ಸನ್ಮಾನ

0

ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಅಂಗವಾಗಿ ಕಾಸರಗೋಡು ಜಿಲ್ಲಾ ಮೀನು ಕೃಷಿಕರ ಸಂಗಮ ಮತ್ತು ಅತ್ಯುತ್ತಮ ಮೀನು ಕೃಷಿಕರನ್ನು ಗೌರವಿಸುವ ಕಾರ್ಯಕ್ರಮವು ಆಸ್ಪಿರೇಷನ್ ಬ್ಲಾಕ್ ಪರಪ್ಪ ಇಲ್ಲಿ ನಡೆಯಿತು .

ಕಾರ್ಯಕ್ರಮವನ್ನು ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಂ. ಲಕ್ಷಿ ಉದ್ಘಾಟಿಸಿದರು. ಉತ್ತಮ ಮೀನು ಕೃಷಿಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೃತಕ ಕೆರೆಯಲ್ಲಿ ಮೀನು ಸಾಕಾಣಿಕೆ ಯಲ್ಲಿ ಉತ್ತಮ ಮೀನು ಕೃಷಿ ಮಾಡಿರುವ ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಇವರನ್ನು ಮೀನುಗಾರಿಕೆ ಇಲಾಖೆ ಕಾಸರಗೋಡು ಅಭಿನಂದಿಸಲಾಯಿತು.

ಅರುಣ್ ರಂಗತ್ತಮಲೆಯವರು ಆರು ವರ್ಷಗಳಿಂದ ಮೀನು ಕೃಷಿಯಲ್ಲಿ ತೊಡಗಿದ್ದು, ಔಷಧಿ ಗುಣವುಳ್ಳ ಅನಾಬಸ್ ಮೀನು ಸಾಕುತ್ತಿದ್ದಾರೆ.