ಅರಂತೋಡು: ಗುರುಪೂರ್ಣಿಮೆಯ ಪ್ರಯುಕ್ತ ಸರೋಜಿನಿ ಕಲ್ಲುಗದ್ದೆಯವರಿಗೆ ಗೌರವಾರ್ಪಣೆ

0

ಗುರುಪೂರ್ಣಿಮೆಯ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು ಮಹಾಶಕ್ತಿ ಕೇಂದ್ರದ.. ಅರಂತೋಡು ಗ್ರಾಮದ ಬೂತ್ ಸಂಖ್ಯೆ 217 ರಲ್ಲಿ ಶ್ರೀಮತಿ ಸರೋಜಿನಿ ಕಲ್ಲುಗದ್ದೆ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ಮಂಡಲ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಪ್ರದಾನ ಕಾರ್ಯದರ್ಶಿ ಸತೀಶ್ ನಾಯ್ಕ, ಮಹಿಳಾ ಮೋರ್ಚದ ಕಾರ್ಯದರ್ಶಿ ಮತ್ತು ಗುತ್ತಿಗಾರು ಮಹಾ ಶಕ್ತಿ ಕೇಂದ್ರ ಮಹಿಳಾ ಪ್ರಮುಖ್ ಭಾರತಿ ಪುರುಷೋತ್ತಮ, ಅರಂತೋಡು ಶಕ್ತಿ ಕೇಂದ್ರದ ಪ್ರಮುಖ್ ರೋಹಿತ್ ಕಲ್ಲುಗದ್ದೆ, ಬೂತ್ ಅಧ್ಯಕ್ಷರಾದ ಮೋಹನ್ ಪಾರೇಮಜಲು, ಬೂತ್ ಕಾರ್ಯದರ್ಶಿ ಮನ್ವಿತ್ ಕಲ್ಲುಗದ್ದೆ , 217 ಬೂತ್ ನ BL2 ಮಂಜುನಾಥ್ ಕಾಟೂರ್, ಸಕ್ರಿಯ ಕಾರ್ಯಕರ್ತ ಹರಿಪ್ರಸಾದ್ ಕಲ್ಲುಗದ್ದೆ ಉಪಸ್ಥಿತರಿದ್ದರು.