ರೋಟರಿ ಕ್ಲಬ್ ಸುಳ್ಯ ಪ್ರಾಯೋಜಿತ -ರೋಟರಿ ಚಾರಿಟೇಬಲ್ ಟ್ರಸ್ಟ್ ನ 2025-26 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಜುಲೈ 09ರಂದು ಟ್ರಸ್ಟ್ ನ ಕಚೇರಿಯಲ್ಲಿ ಟ್ರಸ್ಟ್ ನ ಚೇರ್ಮನ್ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ – ರೊ. ಡಾ. ರಾಮ ಮೋಹನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿಯಾಗಿ/ ಸಂಚಾಲಕರಾಗಿ ರೊ. ಪ್ರಭಾಕರ ನಾಯರ್ ಖಜಾಂಜಿಯಾಗಿ ರೊ.ಮಧುಸೂದನ್ ಅವಿರೋಧವಾಗಿ ಆಯ್ಕೆಯಾದರು ಹಾಗೂ ಅಧಿಕಾರ ಸ್ವೀಕರಿಸಿದರು.








ಈ ಸಂದರ್ಭದಲ್ಲಿ ನಿರ್ಗಮಿತ ಛೇರ್ಮನ್ ರೊ. ಯೋಗಿತಾ ಗೋಪಿನಾಥ್ ಮತ್ತು ಟ್ರಸ್ಟಿ ರೊ.ದಯಾನಂದ ಆಳ್ವರನ್ನು ಗೌರವಿಸಿ ಬೀಳ್ಕೊಡಲಾಯಿತು. ನಂತರ ನಡೆದ ಸಭೆಯಲ್ಲಿ ಟ್ರಸ್ಟಿಗಳಾದ ರೊ.ಪ್ರಭಾಕರನ್ ನಾಯರ್ ರವರ ಹೆಸರನ್ನು ರೊ.ಸೀತಾರಾಮ ರೈ ಸವಣೂರು ಹಾಗೂ ಡಾ. ಪುರುಷೋತ್ತಮ ಕೂಜುಗೋಡು ಕಟ್ಟೆಮನೆ ರವರು ರೊ.ಮಧುಸೂದನ್ ರವರ ಹೆಸರನ್ನು ಸೂಚಿಸಿದರು.
ಟ್ರಸ್ಟಿಗಳಾದ ರೊ. ಆನಂದ ಖಂಡಿಗರವರು ಮತ್ತು ರೊ. ಹರಿರಾಯ ಕಾಮತ್ ಅನುಮೋದಿಸಿದರು. 1980-81 ರಿಂದ ರೋಟರಿ ಕ್ಲಬ್ ಸುಳ್ಯ ಪ್ರಾಯೋಜಿತ ರೋಟರಿ ಚಾರಿಟೇಬಲ್ ಟ್ರಸ್ಟಿನ ಅಡಿಯಲ್ಲಿ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ.










