ಸುಳ್ಯ ನಾವೂರು ಜಟ್ಟಿಪಳ್ಳ ರಸ್ತೆಯಲ್ಲಿರುವ ಅನ್ಸಾರಿಯಾ ಎಜುಕೇಶನ್ ಸೆಂಟರ್ ಇದರ ವಾರ್ಷಿಕ ಮಹಾಸಭೆ ಜು.11ರಂದು ಅನ್ಸಾರಿಯಾ ಗಲ್ಪ್ ಆಡಿಟೋರಿಯಂ ನಲ್ಲಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಯ್ಯದ್ ಕುಂಞಿಕೋಯ ತಂಙಳ್ ರವರು ದುವಾಶಿರ್ವಚನ ಮೂಲಕ ಮಹಾಸಭೆಯ ಕಾರ್ಯಕಲಾಪಕ್ಕೆ ಚಾಲನೆ ನೀಡಿದರು.
ಅನ್ಸಾರಿಯಾ ವಿದ್ಯಾರ್ಥಿ ಕಿರಾಹತ್ ಪಠಿಸಿದರು.
ಕಾರ್ಯದರ್ಶಿ ಎ ಬಿ ಕಮಾಲ್ ಆರಂಭದಲ್ಲಿ ಸರ್ವರನ್ನೂ ಸ್ವಾಗತಿಸಿದರು
ಸಭೆಯನ್ನು ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ಉದ್ಘಾಟಿಸಿದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಬ್ದುಲ್ ಕಲಾಂ ಬೀಜಕೊಚ್ಚಿ ವಾಚಿಸಿದರು
ಅನ್ಸಾರಿಯಾ ಲೆಕ್ಕಪತ್ರವನ್ನು
*ಅನ್ಸಾರಿಯಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ ಮಂಡಿಸಿದರು
ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಲೆಕ್ಕಪತ್ರ ವನ್ನು ಶಾಲಾ ಆಡಳಿತ ಸಮಿತಿ ನಿರ್ದೇಶಕ ಶಾಫಿ ಕುತ್ತಮೊಟ್ಟೆ ಮಂಡಿಸಿದರು.
ಅನ್ಸಾರಿಯಾ ಗಲ್ಪ್ ಆಡಿಟೋರಿಯಂ ಲೆಕ್ಕಪತ್ರ ಮಂಡನೆಯನ್ನು ಅನ್ಸಾರಿಯಾ ಜಿಸಿಸಿ ಕೋಶಾಧಿಕಾರಿ ಹಾಜಿ ಅಬ್ದುಲ್ ಹಮೀದ್ ಎಸ್ ಎಂ ಹಾಗೂ ಜಿಸಿಸಿ ಜೊತೆ ಕಾರ್ಯದರ್ಶಿ ಅಬ್ದುಲ್ ರವೂಪ್ ಪ್ಯಾನ್ಸಿ ಮಂಡಿಸಿದರು.
ಅನ್ಸಾರಿಯಾ ಮದರಿಸ್ ಅಬೂಭಕ್ಕರ್ ಹಿಮಮಿ ಸಖಾಫಿ, ಖತೀಬರಾದ ಹಾಫಿಳ್ ಹಾಮಿದ್ ಸಖಾಫಿ,ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್,ಗಾಂಧಿನಗರ ಜಮಾಯತ್ ಕಮಿಟಿ ಮಾಜಿ ಅಧ್ಯಕ್ಷ ಹಾಜಿ ಕೆಎಂ ಮುಸ್ತಫಾ, ಹಾಜಿ ಪಿ ಎ ಮಹಮ್ಮದ್ ಸೇರಿದಂತೆ ಅನೇಕ ಗಣ್ಯರು ಸಭೆಯಲ್ಲಿ ಉಪಸ್ಥಿತರಿದ್ದರು .










ಸಭೆಯಲ್ಲಿ
ಮಸೀದಿ ನವಿಕರಣ,
ದಹವ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಹಾಗೂ ಇನ್ನಿತರ ಅಭಿವೃದ್ಧಿ ಕುರಿತು ಯೋಜನೆಗಳ ಮಂಜೂರಾತಿ ಪಡೆದು ಕೊಂಡರು.
ಸಲಹಾ ಸಮಿತಿ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್,ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್,ಗಾಂಧಿನಗರ ಜುಮ್ಮಾ ಮಸೀದಿ ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿ, ಹಾಜಿ ಅಬ್ದುಲ್ ಖಾದರ್ ಕಲ್ಲಪಳ್ಳಿ,ಹಾಜಿ ಐ ಇಸ್ಮಾಯಿಲ್, ಹಾಜಿ ಹಮೀದ್ ಎಸ್ ಎ ಯವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಕೆ.ಎಂ ಅಬ್ದುಲ್ ಮಜೀದ್ ಜನತಾ, ಹಾಜಿ ಅಬ್ದುಲ್ ಖಾದರ್ ಪಟೇಲ್,ಎಸ್ ಪಿ ಅಬೂಭಕ್ಕರ್, ಅಬ್ದುಲ್ ಲತೀಫ್ ಹರ್ಲಡ್ಕ, ಶರೀಫ್ ಜಟ್ಟಿಪಳ್ಳ, ಕೆ.ಎ ಅಬ್ದುಲ್ ಕಮಾಲ್ ಬೀಜಕೊಚ್ಚಿ, ಮಹಮ್ಮದ್ ಕಮಾಲ್ ಎಬಿ,ಆದಂ ಹಾಜಿ ಕಮ್ಮಾಡಿ,ಹಾಜಿ ಎಸ್ ಎಂ ಅಬ್ದುಲ್ ಹಮೀದ್,ಜೆ ಎನ್ ಅಬೂಭಕ್ಕರ್, ಕೆ ಎ ಅಬ್ದುಲ್ ಕಲಾಂ ಕಟ್ಟೆಕ್ಕಾರ್, ಅಬ್ದುಲ್ ಹಮೀದ್ ಬೀಜಕೊಚ್ಚಿ, ಕೆಬಿ ಇಬ್ರಾಹಿಂ, ಸಿದ್ದೀಕ್ ಕೊಕ್ಕೊ,ಸಿದ್ದೀಕ್ ಕಟ್ಟೆಕ್ಕಾರ್, ಮಹಮ್ಮದ್ ಶರೀಫ್ ಎಂ ಕೆ,ಶಾಫಿ ಕುತ್ತಮೊಟ್ಟೆ,ಹಾಜಿ ಕೆ ಹಸನ್,ಹಾಜಿ ಅಬ್ದುಲ್ ಹಮೀದ್ ಜನತಾ,ಹಾಜಿ ಕೆ ಎ ಅಬ್ದುಲ್ ಗಫಾರ್,ಉಮ್ಮರ್ ಕೆ ಎಸ್,ಹಾಜಿ ಕೆ ಎಂ ಮುಸ್ತಫಾ, ಇಕ್ಬಾಲ್ ಎಲಿಮಲೆ,ರಶೀದ್ ಗೂನಡ್ಕ, ಅಝೀಝ್ ಸಂಗಂ,ಸಂಶುದ್ದೀನ್ ಕೆಬಿ,ಶಹೀದ್ ಪಾರೆ,ಹಾಜಿ ಇಬ್ರಾಹಿಂ ಕತ್ತರ್,ಇಕ್ಬಾಲ್ ಗುಜಿರಿ,ಅಝೀಝ್ ಕಚ್ಚು, ಹಾಜಿ ಅಬ್ದುಲ್ ಶುಕೂರ್ ರವರನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾದ ಅಬ್ದುಲ್ ಮಜೀದ್ ಕೊನೆಯಲ್ಲಿ ಶುಭ ಹಾರೈಸಿ ಮಾತನಾಡಿದರು.
ವಂದನಾರ್ಪಣೆ ಮತ್ತು ಕಾರ್ಯಕ್ರಮ ನಿರೂಪಣೆಯನ್ನು ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಮಾಡಿದರು.










