ದೇವರಮಜಲಿನಲ್ಲಿ ನೇಜಿ ಕೃಷಿ ನಾಟಿ ಮತ್ತು ಪ್ರಾತ್ಯಕ್ಷಿತೆ

0

ಎಡಮಂಗಲ ಗ್ರಾಮದ ದೇವರಮಜಲು ಕೇರ್ಪಡದಲ್ಲಿ ಪ್ರಗತಿಪರ ಕೃಷಿಕರಾದ ಅವಿನಾಶ್ ದೇವರಮಜಲು ಅವರು ಹೊಸದಾಗಿ ನಿರ್ಮಿಸಿದ ಭತ್ತದ ಗದ್ದೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಭತ್ತದ ತಳಿ ಸಹ್ಯಾದ್ರಿ ಬ್ರಹ್ಮ ನೇಜಿ ನಾಟಿ ಕಾರ್ಯ ಹಾಗೂ ಸ. ಉ. ಹಿ. ಪ್ರಾ. ಶಾಲೆ ಮುರುಳ್ಯ ಇಲ್ಲಿಯ ಮಕ್ಕಳಿಗೆ ನೇಜಿ ನಾಟಿಯ ಪ್ರಾತ್ಯಕ್ಷತೆ ನೀಡಲಾಯಿತು.



ಈ ಸಂದರ್ಭದಲ್ಲಿ ಕು.ಸ್ಮಿತಾ ತಾಂತ್ರಿಕ ವ್ಯವಸ್ಥಾಪಕರು ಕೃಷಿ ಇಲಾಖೆ ಪಂಜ, ಇವರು ಗದ್ದೆ ಕೃಷಿ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿದರು. ಕೃಷಿ ಸಖಿ ಪ್ರೇಮ ಮೋಹನ ಎಡಮಂಗಲ, ಶ್ರೀಮತಿ ವಾರಿಜಾ ದಾಮೋದರ ಗೌಡ ದೇವರ ಮಜಲು ಮತ್ತು ಮನೆಯವರು, ನಿವೃತ್ತ ಅರಣ್ಯಾಧಿಕಾರಿ ದೇರಣ್ಣ ಗೌಡ ಅಬ್ಬಡ ಮತ್ತು ಕಮಲ ದೇರಣ್ಣ ಗೌಡ ಅಬ್ಬಡ,ಮುರುಳ್ಯ ಶಾಲಾ ಗೈಡ್ ಶಿಕ್ಷಕಿ ನಾಳಿನಾಕ್ಷಿ ಬಿ, ಹರ್ಷಿತಾ ಸುರೇಶ್ ಬೀರುಕುಡಿಕೆ, ಮೇದಪ್ಪ ಗೌಡ ಕೇರ್ಪಡ, ಯತೀಂದ್ರನಾಥ ರೈ ನಾಗನಕಜೆ, ಕಾವ್ಯಂಜಲಿ ಕಾರ್ಕಳ, ಗೀತಾ ವಾಚಣ್ಣ ಗೌಡ ಕೇರ್ಪಡ, ವಾರಿಜಕ್ಷಿ ಕೇರ್ಪಡ, ಪುಷ್ಪವತಿ ಕೇರ್ಪಡ , ಮುರುಳ್ಯ ಶಾಲಾ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ಸವಿತಾ ಕರಂಬಿಲ, ಶಾಲಾ ಮಕ್ಕಳು ಮತ್ತು ಸ್ಥಳಿಯರು ಉಪಸ್ಥಿತರಿದ್ದು ನೇಜಿ ನಾಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ವರದಿ: ಸಂಕಪ್ಪ ಸಾಲಿಯನ್ ಅಲೆಕ್ಕಾಡಿ