
ಗುರುಪೂರ್ಣಿಮೆ ಪ್ರಯುಕ್ತ ಮಂಡೆಕೋಲಿನಲ್ಲಿ ಬಿಜೆಪಿ ಶಕ್ತಿಕೇಂದ್ರದ ವತಿಯಿಂದ ನಿವೃತ್ತ ಶಿಕ್ಷಕ ರಾಮಕೃಷ್ಣ ಗೌಡ ಮಾವಂಜಿಯವರನ್ನು ಅವರ ಮನೆಗೆ ತೆರಳಿ ಗೌರವಿಸಲಾಯಿತು.









ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಹರೀಶ್ ಕಂಜಿಪಿಲಿ, ಸುಭೋದ್ ಶೆಟ್ಟಿ ಮೇನಾಲ, ಹೇಮಂತ್ ಮಠ, ಶಿವಪ್ರಸಾದ್ ಉಗ್ರಾಣಿಮನೆ, ಸುರೇಶ್ ಕಣೆಮರಡ್ಕ, ಪುಲಸ್ತ್ಯ ರೈ, ಶಂಕರ ಪೆರಾಜೆ, ಉದಯಕುಮಾರ್ ಆಚಾರ್, ಚಂದ್ರಜಿತ್ ಮಾವಂಜಿ, ವಿನುತಾ ಪಾತಿಕಲ್ಲು, ಆಶಾ ತಿಮ್ಮಪ್ಪ ಗೌಡ, ಪ್ರತಿಮಾ ಹೆಬ್ಬಾರ್, ಉಷಾ ಗಂಗಾಧರ್ ಮಾವಂಜಿ, ಅನಿಲ್ ತೋಟಪ್ಪಾಡಿ ಮೊದಲಾದವರು ಇದ್ದರು.
ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿಯವರು 11 ವರ್ಷ ಆಡಳಿತ ಪೂರೈಕೆ ಮಾಡಿದ ಪ್ರಯುಕ್ತ ಬಿಜೆಪಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಮಂಡೆಕೋಲು ಸಹಕಾರಿ ಸಂಘದ ನಿರ್ದೇಶಕ ಲಕ್ಷ್ಮಣ ಉಗ್ರಾಣಿಮನೆಯವರ ಜಮೀನಿನಲ್ಲಿ ಮಾಡಲಾಯಿತು.










