








ಸುಳ್ಯ ಕೊಡಿಯಾಲಬೈಲ್- ದುಗ್ಗಲಡ್ಕ ಮಾರ್ಗವಾಗಿ ಸುಬ್ರಹ್ಮಣ್ಯ ಕ್ಕೆ ಸರಕಾರಿ ಬಸ್ ಇಂದಿನಿಂದ ಆರಂಭಗೊಂಡಿದೆ.
ಈ ಮಾರ್ಗವಾಗಿ ಸರಕಾರಿ ಬಸ್ ಆರಂಭಿಸಬೇಕೆಂದು ಆ ಭಾಗದ ಜನರ ಹಲವು ವರ್ಷಗಳ ಬೇಡಿಕೆ ಇತ್ತು.
ಈ ಬಸ್ ನ್ನು ಇಂದು ಬೆಳಿಗ್ಗೆ ದುಗ್ಗಲಡ್ಕದ ಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸೀತಾನಂದ ಬೇರ್ಪಡ್ಕ, ಹರೀಶ್ ರೈ ಉಬರಡ್ಕ, ಶಿವಕುಮಾರ್ ಈಶ್ವರಡ್ಕ, ಮೋಹನ್ ಕಲಾಪ್ರಿಯ,ತಂಗವೇಲು ಮೊದಲಾದವರು ಉಪಸ್ಥಿತರಿದ್ದರು.










