ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಕೆಂಪುಕಲ್ಲು ಹಾಗೂ ಮರಳು ಗಣಿಗಾರಿಕೆಯನ್ನು ಕಾನೂನು ರೀತಿಯಲ್ಲಿ ತೆರವುಗೊಳಿಸಲು ಆಗ್ರಹ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಹಾಗೂ ಮರಳುಗಾರಿಕೆಗೆ ಸಂಬಂಧ ಪಟ್ಟ ಇಲಾಖೆಯು ಕಾನೂನಿನ ನಿಯಮಗಳನ್ನು ಹೆಚ್ಚಿಸಿದ್ದು, ಇದನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಸಾವಿರಾರು ಕಾರ್ಮಿಕರು ಇಂದು ಸಂಕಷ್ಟಕ್ಕೊಳಗಾಗಿದ್ದಾರೆ.
ಆದ್ದರಿಂದ ಈಗಿನ ಜಟಿಲ ನಿಯಮಗಳನ್ನು ಸಡಿಲಗೊಳಿಸಿ ಜಿಲ್ಲೆಯಲ್ಲಿ ಮತ್ತು ಮರಳು ಗಣಿಗಾರಿಕೆಗೆ ಮತ್ತು ಸಾಗಾಟಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಆಗ್ರಹಿಸಿ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ಜುಲೈ 14 ರಂದು ಭಾರತೀಯ ಮಜ್ದೂರು ಸಂಘ ಹಾಗೂ ಕಾರ್ಮಿಕ ಸಂಘಟನೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ನಡೆಯಿತು.
ಭಾರತೀಯ ಮಜ್ದೂರ್ ಸಂಘ ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷ ಮಧುಸೂದನ್ ರವರು ಪ್ರತಿಭಟನಾ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿ
‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕೆಂಪು ಕಲ್ಲು ಮತ್ತು ಮರಳು ಪೂರೈಕೆಯ ಅಭಾವದಿಂದ ಕೆಲಸ ಲಭಿಸದೇ ಇದ್ದು ಬಹಳ ಸಮಸ್ಯೆ ಆಗಿದೆ.ಕೂಡಲೇ ಸಂಭಂದ ಪಟ್ಟ ಇಲಾಖೆ ನಮ್ಮ ಬೇಡಿಕೆಗೆ ಸ್ಪಂದಿಸ ಬೇಕು. ಇಲ್ಲದಿದ್ದಲ್ಲಿ ಮುಂದಿನ ಪ್ರತಿಭಟನೆ ನಿಮ್ಮ ಕಚೇರಿ ಮುಂಭಾಗದಲ್ಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.
ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲರಾದ ಅನಿಲ್ ಕುಮಾರ್ ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿಯ ಭ್ರಷ್ಟಾಚಾರದ ವಿರುದ್ಧ ಹಾಗೂ ಕಾರ್ಮಿಕರಿಗೆ ಅಗತ್ಯ ಇಲ್ಲದ ಯೋಜನೆಗಳನ್ನು ಸರಕಾರ ತರುವುದನ್ನು ನಾವು ವಿರೋಧಿಸುತಿದ್ದೇವೆ. ಹಾಗೂ ಕಾರ್ಮಿಕರ ಮಕ್ಕಳ ಸ್ಥಾಲರ್ ಶಿಪ್ ಹಾಗೂ ಇತರ ಸಹಾಯಧನಗಳನ್ನು ಕೂಡಲೇ ಕಾರ್ಮಿಕರಿಗೆ ಪಾವತಿಸುವಂತೆ ಮತ್ತು ಹೊರರಾಜ್ಯದಿಂದ ಬರುವ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯು ಕಡ್ಡಾಯವಾಗಿ ನೋಂದಣಿಗೊಳಿಸ ಬೇಕೆಂದು ಆಗ್ರಹಿಸಿದರು. ನಾವು ಕೇಸರಿ ಬಾವುಟದಡಿಯಲ್ಲಿ ನಿಂತು ಪ್ರತಿಭಟನೆ ಮಾಡುವವರು. ಯಾವುದೇ ಕಾರಣಕ್ಕೂ ನಾವು ಜಗ್ಗುವವರಲ್ಲ. ನಮಗೆ ನಿಮ್ಮ ಪೊಳ್ಳು ಭರವಸೆ ಬೇಡ. ಪೂರ್ಣವಾದ ವಿಶ್ವಾಸದ ಮಾತು ಕೊಡ ಬೇಕು ಮತ್ತು ಅದನ್ನು ಪೂರ್ಣ ಪ್ರಮಾಣ ದಲ್ಲಿ ಕಾರ್ಯಗತಗೊಳಿಸಬೇಕು ಇಲ್ಲದಿದ್ದಲ್ಲಿ ನಮ್ಮನ್ನು ಜಿಲ್ಲಾ ಮಟ್ಟಕ್ಕೆ ಮತ್ತು ರಾಜ್ಯಮಟ್ಟಕ್ಕೆ ಪ್ರತಿಭಟನೆಗೆ ಅವ್ಹಾನಿಸಿದಂತೆ ಆಗುತ್ತದೆ ಎಂದು ಅವರು ಮುಂದಿನ ಪ್ರತಿಭಟನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದರು.
ಇಂದು ಸುಳ್ಯದಲ್ಲಿ ಕಟ್ಟಡ ಕಾರ್ಮಿಕರು,ಕೆಂಪು ಕಲ್ಲು ಹಾಗೂ ಮರಳು ಗುತ್ತಿಗೆದಾರರು, ಸಾಗಾಟಗಾರರು,ಲಾರಿ ಮತ್ತು ಪಿಕ್‌ಅಪ್ ಚಾಲಕ-ಮಾಲಕರು, ಕಟ್ಟಡಕ್ಕೆ ಬೇಕಾದ ಎಲ್ಲಾ ರೀತಿಯ ಕಚ್ಚಾ ವಸ್ತುಗಳ ಮಾರಾಟಗಾರರು, ಗುತ್ತಿಗೆದಾರರು, ಇಂಜನಿಯರರು,ರಿಕ್ಷಾ ಚಾಲಕ-ಮಾಲಕರು,ಕಟ್ಟಡ ನಿರ್ಮಾಣ ಮಾಡುತ್ತಿರುವಂತಹ ಮನೆಯ ಮಾಲಿಕರುಗಳನ್ನು ಈ ಪ್ರತಿಭಟನೆಯಲ್ಲಿ ಸೇರಿಸಿಕೊಂಡು ಸುಳ್ಯ ತಾಲೂಕು ಕೇಂದ್ರವಾಗಿ ರಚಿಸಿ ಇಂದು ಈ ರೀತಿಯ ಪ್ರತಿಭಟನೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಸಹಕಾರ ನೀಡಿದ ಸುಳ್ಯ ದ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ಶ್ಲಾಘಿಸುತ್ತೇವೆ ಎಂದು ಹೇಳಿದರು.








ಬಿ ಎಂ ಎಸ್ ರಾಜ್ಯ ಸಮಿತಿಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಈ ಸಂದರ್ಭದಲ್ಲಿ ಮಾತನಾಡಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ರವರು ಕಾರ್ಮಿಕರಿಗಾಗಿ ಯಾವುದೇ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ.ಅವರ ಬೇಜವಾಬ್ದಾರಿ ಹೇಳಿಕೆಗಳಿಂದ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಮಿಕರು ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಜಿಲ್ಲೆಯ ಕಾರ್ಮಿಕರ ಸರಿಯಾದ ಸಮಸ್ಯೆಗಳನ್ನು ಆಲಿಸಿ ಸಚಿವರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಇಲ್ಲದಿದ್ದಲ್ಲಿ ಇದೇ ಕಾರ್ಮಿಕ ಸಂಘಟನೆ ಮುಂದಿನ ದಿನಗಳಲ್ಲಿ ಅವರನ್ನು ಕೂಡ ಸ್ಥಾನದಿಂದ ಕೆಳಗಿಳಿಸುವ ಶಕ್ತಿ ಈ ಕಾರ್ಮಿಕ ಸಂಘಟನೆ ಕಡ್ಡಾಯವಾಗಿ ಮಾಡಲಿದೆ ಎಂದು ಹೇಳಿದರು.
ಗುತ್ತಿಗೆಧಾರ ಸಂಘ ದಿಂದ ಶುಭೋದ್ ಶೆಟ್ಟಿ ಮೇನಾಲ ಮಾತನಾಡಿ ಕೆಂಪು ಕಲ್ಲು ಮತ್ತು ಮರಳು ಸ್ಥಗಿತದಿಂದ ಗುತ್ತಿಗೆ ಧಾರರಿಗೆ ಮತ್ತು ಕಾರ್ಮಿಕರಿಗೆ ಅನೇಕ ರೀತಿಯ ತೊಂದರೆ ಗಳಾಗಿದ್ದು ಸರಕಾರ ನಿಭಂದನೆ ಹೇರಿಸ ಬೇಕಾಗಿದ್ದು ಬಡವರು ದುಡಿದು ತಿನ್ನುವ ವಸ್ತು ಗಳ ಮೇಲೆ ಅಲ್ಲ. ಜಿಲ್ಲೆಯಲ್ಲಿ ನಡೆಯುತ್ತಿರುವ ಗಾಂಜಾ ಸಾಗಟ ಮತ್ತು ಮಾಧಕ ವಸ್ತುಗಳ ಸಾಗಾಟ ದ ಮೇಲೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಳಿಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಶಾಸಕರಾದ ಕು.ಭಾಗೀರಥಿ ಮುರುಳ್ಯ ರವರಿಗೆ ಕಾರ್ಮಿಕ ಬೇಡಿಕೆಗಳ ಮನವಿ ಯನ್ನು ನೀಡಿ ಸರಕಾರದ ಗಮನಕ್ಕೆ ನೀಡುವಂತೆ ಕೇಳಿಕೊಂಡರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು ಇದು ಕಡ್ಡಾಯವಾಗಿ ಆಗ ಬೇಕಾದ ಕೆಲಸ ವಾಗಿದ್ದು ಕಾರ್ಮಿಕರ ಬೇಡಿಕೆ ಬಗ್ಗೆ ಸಂಭಂದಪಟ್ಟ ಸಚಿವರು ಗಳ ಗಮನಕ್ಕೆ ನೀಡುತ್ತೇನೆ. ಸ್ಪಂದಿಸದಿದ್ದಲ್ಲಿ ಮುಂದಿನ ಅಧಿವೇಶನ ದಲ್ಲಿ ಈ ಬಗ್ಗೆ ಕಲಾಪದಲ್ಲಿ ಚರ್ಚೆ ಮಾಡುವ ಭರವಸೆಯನ್ನು ನೀಡಿದರು.
ಬಳಿಕ ತಾಲೂಕು ಕಚೇರಿ ಯಿಂದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಮತ್ತು ನಮ್ಮ ಮನವಿಯನ್ನು ಇಲ್ಲಿ ಬಂದೇ ಅವರು ಪಡೆದು ಕೊಳ್ಳ ಬೇಕು.ಇಲ್ಲದಿದ್ದಲ್ಲಿ ಮಾಣಿ ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ಸಮಯವನ್ನು ಹೆಚ್ಚಿಸುವುದಾಗಿ ಪಟ್ಟು ಹಿಡಿದ ಪ್ರತಿಭಟನೆ ಕಾರರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸತೊಡಗಿದರು.
ಬಳಿಕ ಸ್ಥಳಕ್ಕೆ ಬಂದ ಸುಳ್ಯ ಉಪತಹಶೀಲ್ದಾರ್ ಮಂಜುನಾಥ್ ಹಾಗೂ ಕಂದಾಯ ನಿರೀಕ್ಷಕ ಅವಿನ್ ರಂಗತಮಲೆ ಯವರು ಮುಖಂಡರುಗಳಿಂದ ಮನವಿಯನ್ನು ಸ್ವೀಕರಿಸಿದರು.
ತದನಂತರ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು.
ಸುಮಾರು 500 ಕ್ಕೂ ಹೆಚ್ಚು ಮಂದಿ ವಿವಿಧ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗ ವಹಿಸಿದ್ದರು.
ಲಾರಿ ಮತ್ತು ಕೆಂಪು ಕಲ್ಲು ಸಂಘದ ಅಧ್ಯಕ್ಷ ಪ್ರಕಾಶ್, ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಇಂಡಸ್ಟ್ರಿಯಲ್ ಸಂಘದ ನಾಗೇಶ್, ಬಿ ಜೆ ಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷ ಹರೀಶ್ ಕಂಜಿ ಪಿಲ್ಲಿ, ನ ಪಂ ಅಧ್ಯಕ್ಷೆ ಶಶಿಕಲಾ ನೀರ ಬಿದಿರೆ, ಸದಸ್ಯರು ಗಳಾದ ವಿನಯ್ ಕಂದಡ್ಕ ಕಿಶೋರಿ ಶೇಟ್, ಶೀಲಾ ಕುರುಂಜಿ, ಮೊದಲಾದವರು ಉಪಸ್ಥಿತರಿದ್ದು ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸಿದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಮನೋಹರ, ಕೋಶಾಧಿಕಾರಿ ಕಿಟ್ಟಣ್ಣ ರೈ ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಸದಸ್ಯರುಗಳು ಪದಾಧಿಕಾರಿಗಳು ಭಾಗವಹಿಸಿದ್ದರು.










