ಸುಬ್ರಹ್ಮಣ್ಯದಲ್ಲಿ ಶಕ್ತಿ – ಸಂಭ್ರಮಾಚರಣೆ, ಬಸ್ ಚಾಲಕ, ನಿರ್ವಾಹಕರಿಗೆ ಸನ್ಮಾನ

ಕರ್ನಾಟಕ ಸರಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಯ ಫಲಾನುಭವಿಗಳ ಸಂಖ್ಯೆ 500 ಕೋಟಿ ಗಡಿ ದಾಟಿರುವ ಹಿನ್ನಲೆಯಲ್ಲಿ ಶಕ್ತಿ – ಸಂಭ್ರಮಾಚರಣೆ ಕಾರ್ಯಕ್ರಮ ಸುಬ್ರಹ್ಮಣ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಜು.14ರಂದು ನಡೆಯಿತು.
















ಬಸ್ ನಿಲ್ದಾಣದಲ್ಲಿ ಸೇರಿದ ಗ್ಯಾರಂಟಿ ಅನುಷ್ಠಾನ ಸಮಿತಿಯವರು, ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿ ಶಕ್ತಿ ಯೋಜನೆಯ 500 ಕೋಟಿ ಫಲಾನುಭವಿಗಳು ಸರಕಾರದ ಯೋಜನೆ ಪಡೆದುಕೊಂಡಿರುವುದಕ್ಕೆ ಸಾಧನೆಯ ಸ್ಟಿಕ್ಕರ್ ಬಿಡುಗಡೆಗೊಳಿಸಿ, ಸಂಭ್ರಮಾಚರಣೆ ನಡೆಸಿದರು. ಆರಂಭದಲ್ಲಿ ಬಸ್ ಗಳಿಗೆ ಪೂಜೆ ನಡೆಸಲಾಯಿತು.
ಬಳಿಕ ಮುಖಂಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿಯ ಚಾಲಕರು, ನಿರ್ವಾಹಕರನ್ನು ಗೌರವಿಸಲಾಯಿತು.


ಕಡಬ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಭಿಲಾಷ್, ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ, ಸೌಮ್ಯ ಭರತ,ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್, ಪ್ರಮುಖರಾದ ಪಿಪಿ ವರ್ಗೀಸ್, ಕಿಶೋರ್ ಅರಂಪಾಡಿ, ಗೋಪಾಲ್ ಎಣ್ಣೆ ಮಜಲ್, ಜಗದೀಶ ಕೆರಕೋಡಿ, ಶಿವರಾಮ ರೈ, ಸಿ. ಜೆ. ಸೈಮನ್, ಷರೀಫ್, ಶೇಷಕುಮಾರ್ ಶೆಟ್ಟಿ, ಮಾಧವ ದೇವರಗದ್ದೆ, ಜಗದೀಶ ಪಡ್ಪು, ಅಜಿತ್, ಶಾರದಾ ದಿನೇಶ್, ಶಶಿಧರ ಬುಟ್ಟಡ್ಕ, ಶೇಷಕುಮಾರ್ ಶೆಟ್ಟಿ, ಅಶ್ರಫ್ ಸೇಡಿಗುಂಡಿ ಮತ್ತಿತರರು ಉಪಸ್ಥಿತರಿದ್ದರು.










