ಪೆರಾಜೆಯಲ್ಲಿ ಬೀಡು ಬಿಟ್ಟಿರುವ ಒಂಟಿ ಸಲಗವನ್ನು ಓಡಿಸುವ ಕಾರ್ಯಚರಣೆ

0

ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆಯಿಂದ ಪ್ರಕಟಣೆ

ಪೆರಾಜೆ ಗ್ರಾಮದ ಖಾಸಗಿ ತೋಟದಲ್ಲಿ ಬೀಡುಬಿಟ್ಟ ಒಂಟಿ ಕಾಡನೆಯನ್ನು
ಜು 15 ರಂದು ಕಾರ್ಯಾಚರಣೆ ಮೂಲಕ ಬಂಗಾರಕೋಡಿ ಮಾರ್ಗವಾಗಿ ಭಾಗಮಂಡಲ ಮೀಸಲು ಅರಣ್ಯಕ್ಕೆ ಓಡಿಸುವ ಕಾರ್ಯಚರಣೆ ಆರಂಭಗೊಂಡಿದೆ.


ಈ ಹಿನ್ನಲೆಯಲ್ಲಿ ಪೆರಾಜೆ ಗ್ರಾಮದ ಗ್ರಾಮಸ್ತರು,ಸಾರ್ವಜನಿಕರು,ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು, ಶಾಲಾ ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾರ್ಯಚರಣೆಗೆ ಸಹಕಾರ ನೀಡುವಂತೆ ವಲಯ ಅರಣ್ಯಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಭಾಗಮಂಡಲದಲ್ಲಿರುವ ಕೊಡಗು ವಿಭಾಗ ಎಲಿಫೆಂಟ್ ಟಾಸ್ಕ್ ಫೋರ್ಸ್ ತಂಡದವರು ಬಂದಿದ್ದು ಅವರ ಜೊತೆ ಸ್ಥಳೀಯರಾದ ಪ್ರದೀಪ ಕುಂಬಳಚೇರಿ, ಅನಿಲ್ ಕುಂಬಳಚೇರಿ,ನವೀನ ಕುಂಬಳಚೇರಿ, ಕುಸುಮಾಧರ ಕುಂಬಳಚೇರಿ ಹಾಗೂ ಬಾಬು ನಾಯ್ಕ ಪೆರಾಜೆ ಅವರು ಆನೆ ಓಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಸಹಕರಿಸಿದ್ದಾರೆ.