ಶುಲ್ಕ ರೂ.100 ಪಾವತಿಸಿ ಹೃದಯ ಸಂಬಂಧಿ ತಪಾಸಣೆಗೆ ಅವಕಾಶ
ಕೆ.ವಿ.ಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ಇದೀಗ ರಿಯಾಯಿತಿ ದರದಲ್ಲಿ ಆರೋಗ್ಯ ಮೇಳವನ್ನು ಮುಂದೂಡಲಾಗಿದ್ದು ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ನುರಿತ ವೈದ್ಯರುಗಳಿಂದ ತಪಾಸಣೆ ಮತ್ತು ನಿಗದಿತ ಚಿಕಿತ್ಸೆಗಳನ್ನು ಹೊರ ಮತ್ತು ಒಳರೋಗಿಗಳಿಗೆ ರಿಯಾಯಿತಿ ದರದಲ್ಲಿ ಕೊಡಲಾಗುತ್ತಿದೆ.









ಆಸ್ಪತ್ರೆಯಲ್ಲಿರುವ ವಿಭಾಗವಾರು ಸೌಲಭ್ಯಗಳು ಜನರಲ್ ಮೆಡಿಸಿನ್, ಶಸ್ತ್ರ ಚಿಕಿತ್ಸೆ ವಿಭಾಗ, ಹೆರಿಗೆ ಮತ್ತು ಸ್ತ್ರೀರೋಗ ವಿಭಾಗ, ಎಲುಬು ಮತ್ತು ಕೀಲು ರೋಗ ವಿಭಾಗ, ಕಿವಿ ಮೂಗು ಮತ್ತು ಗಂಟಲು ವಿಭಾಗ, ಮಕ್ಕಳ ವಿಭಾಗ ,ನೇತ್ರ ಚಿಕಿತ್ಸಾ ವಿಭಾಗ, ಚರ್ಮ ಮತ್ತು ಲೈಂಗಿಕ ರೋಗ ವಿಭಾಗ, ಮನೋರೋಗ ವಿಭಾಗ, ಶ್ವಾಸ ಕೋಶ ವಿಭಾಗ ದಲ್ಲಿ ವಿಶೇಷವಾದ ರಿಯಾಯಿತಿ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುವುದು. ಒಳರೋಗಿಗಳಿಗೆ ಎಂ.ಆರ್.ಐ ಮತ್ತು ಸಿಟಿ ಸ್ಕ್ಯಾನ್ ನಿಗದಿತ ರಿಯಾಯಿತಿ ದರದಲ್ಲಿ ಮಾಡಲಾಗುವುದು.
ಹೃದಯ ತಪಾಸಣಾ ಕೇಂದ್ರದಲ್ಲಿ ನೋಂದಾಯಿತ ವೈದ್ಯರಿಂದ ಹೃದಯ ತಪಾಸಣೆ, ರಕ್ತದ ಒತ್ತಡ ತಪಾಸಣೆ, ಇಸಿಜಿ ,ಬ್ಲಡ್ ಶುಗರ್ ಕೇವಲ ರೂ.100 ಪಾವತಿಸಿ ಪರೀಕ್ಷಿಸಲು ಅವಕಶವಿದೆ.
ಅಲ್ಲದೆ ಅಗತ್ಯವಿದ್ದಲ್ಲಿ ಹೆಚ್ಚುವರಿ ತಪಾಸಣೆ ಹಾಗೂ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿಮಾಡಿಕೊಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










