ಬೆಳ್ಳಿಪ್ಪಾಡಿ ಶಕ್ತಿ ಯುವಕ ಮಂಡಲದ ವತಿಯಿಂದ ನಡೆದ ಕೆಸರ್ ಡೊಂಜಿ ದಿನ

0

ಕೆಸರಿನ ಗದ್ದೆಗಿಳಿದು ಮಕ್ಕಳೊಂದಿಗೆ ಸಂಭ್ರಮಿಸಿದ ಅತಿಥಿ ಅಕ್ಷಯ್ ಕೆ.ಸಿ

ಬೆಳ್ಳಿಪ್ಪಾಡಿ ಶಕ್ತಿ ಯುವಕ ಮಂಡಲದ ಆಶ್ರಯದಲ್ಲಿ ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿಯವರ ಗದ್ದೆಯಲ್ಲಿ ಜು.13 ರಂದು ಕೆಸರ್ ಡೊಂಜಿ ದಿನ ಕಾರ್ಯಕ್ರಮವು ನಡೆಯಿತು.

ಮುಖ್ಯ ಅಭ್ಯಾಗತರಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿಯವರುಕಾರ್ಯಕ್ರಮವನ್ನು ಉದ್ಘಾಟಿಸಿ ಕೆಸರು ಗದ್ದೆಗಿಳಿದು ಮಕ್ಕಳೊಂದಿಗೆ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.
ಬಳಿಕ ಮಾತನಾಡಿದ ಅವರು ಇದು ನನ್ನ ಈ ವರ್ಷದ ಮೊಟ್ಟಮೊದಲ ಕೆಸರಿನಕಾರ್ಯಕ್ರಮವಾಗಿದೆ. ಕೆಸರಿನ ಗದ್ದೆಗೆ ಇಳಿದು ಭಾಗವಹಿಸಿದ ಕ್ಷಣ ಎಂದಿಗೂ ಅವಿಸ್ಮರಣೀಯವಾಗಿ ಮನಸ್ಸಿನಲ್ಲಿರುವುದು ಎಂದು ಸಂತಸ ಹಂಚಿಕೊಂಡರು.

ಈಸಂದರ್ಭದಲ್ಲಿಅತಿಥಿಗಳಾಗಿ ವಕೀಲರಾದ ಕೆ.ಶ್ರೀಕಾಂತ್, ಉದ್ಯಮಿಗಳಾದ ದಿಲೀಪ್ ಪಳ್ಳಂಜಿ,ಹಿರಿಯವೈದ್ಯರು ವಿಶ್ವ ವಿನೋದ ಬನಾರಿ, ತಾ.ಪಂ.ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ,ಹುಕ್ರಪ್ಪ ಗೌಡ ಹಳೆಮನೆ, ಮೋಹನ್ ನಡುಬೈಲು, ಚಂದ್ರಶೇಖರ ಗೌಡ ತೋಟ, ಸೀತಾರಾಮ ರೈ, ಬಾಬು ಅಜಿಲ ಬೆಳ್ಳಿಪ್ಪಾಡಿ ಉಪಸ್ಥಿತರಿದ್ದರು.
ಶಕ್ತಿ ಯುವಕ ಮಂಡಲದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು. ಸ್ಥಳೀಯ ಸಾರ್ವಜನಿಕರು ಮತ್ತು ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡರು.