ಸುಬ್ರಹ್ಮಣ್ಯ : ಕುಲ್ಕುಂದ ಬಳಿ ಮರ ಬಿದ್ದು ಸಂಚಾರ ಸ್ಥಗಿತ, ಮರ ತೆರವು

0

ಟೂರಿಸ್ಟ್ ಕಾರಿನ ಮೇಲೆ ಬಿದ್ದ ಮರ, ಅಪಾಯವಿಲ್ಲದೆ ಪಾರು

ಸುಬ್ರಹ್ಮಣ್ಯದ ಕುಲ್ಕುoದ ವಿಷ್ಣುಮೂರ್ತಿ ದೇವಸ್ಥಾನ ಹತ್ತಿರ ಮರದ ಕೊಂಬೆಯೊಂದು ರಸ್ತೆಗೆ ಅದ್ದಲಾಗಿ ಬಿದ್ದ ಪರಿಣಾಮ ಕೆಲ ಕಾಲ ಸಂಚಾರ ಸ್ಥಗಿತವಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಟೂರಿಸ್ಟ್ ಕಾರೊಂದು ಮುರಿದು ಬಿದ್ದ ಕೊಂಬೆಯಡಿಯಲ್ಲಿ ಸಿಲುಕಿದ್ದು. ಕಾರಿನಲ್ಲಿದ್ದವರು ಅಪಾಯವಿಲ್ಲದೆ ಪಾರಾಗಿದ್ದು, ಕಾರು ಸ್ವಲ್ಪ ಡ್ಯಾಮೇಜ್ ಆಗಿರುವುದಾಗಿ ತಿಳಿದು ಬಂದಿದೆ.
ಪೊಲೀಸರು, ಮೆಸ್ಕಾಂ ನವರು, ಗ್ರಾ.ಪಂ ನವರಿದ್ದು ಸ್ಥಳೀಯರ ಸಹಕಾರದಿಂದ ಮರ ತೆರವು ಮಾಡಿ ಸಂಚಾರ ಸುಗಮಗೊಳಿಸಲಾಯಿತು.