ನಿನ್ನೆ ರಾತ್ರಿ ರೆಂಜಾಳ- ಹೈದಂಗೂರು ಕಡೆಗೆ ಬಂದಿದ್ದ ಕೊಡಪಾಲ ಭಾಗದಲ್ಲಿದ್ದ ಕಾಡಾನೆಗಳು

0

ರಾತ್ರಿಯೇ ಆನೆಗಳನ್ನು ಕಾಡಿಗೆ ಓಡಿಸಿದ ಅರಣ್ಯ ಇಲಾಖೆಯ ತಂಡ

ಮುಂಜಾನೆ ವೇಳೆ ಪತ್ರಕರ್ತನ ಮನೆಯಂಗಳಕ್ಕೆ ಬಂದು ಘೀಳಿಟ್ಟ ಕಾಡಾನೆ

ರಸ್ತೆಯಲ್ಲಿ ಬಾಳೆ -ತೆಂಗಿನ ಗರಿಗಳು ಚೆಲ್ಲಾಪಿಲ್ಲಿ – ಸಾರ್ವಜನಿಕರಲ್ಲಿ ಭಯ-ಆತಂಕ

ಕಳೆದ ಏಳೆಂಟು ತಿಂಗಳಿನಿಂದ ಉಬರಡ್ಕ, ಮೈರಾಜೆ, ರೆಂಜಾಳ, ದಾಸರಬೈಲು, ಹೈದಂಗೂರು, ಕೊಡಪಾಲ ಭಾಗದಲ್ಲಿದ್ದ ಕಾಡಾನೆಗಳು ಸಂಜೆಯಾಗುತ್ತಲೇ ಕೃಷಿ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡುತ್ತಿತ್ತು. ಎರಡು ದಿನದ ಹಿಂದೆ ಕೊಡಪಾಲ, ಬಾಳೆಗುಂಡಿ ಭಾಗದಲ್ಲಿ ತೋಟಕ್ಕೆ ನುಗ್ಗಿ ಕೃಷಿ ಹಾನಿ ಮಾಡಿತ್ತು. ನಿನ್ನೆ ರಾತ್ರಿ ಅಲ್ಲಿಂದ ರೆಂಜಾಳ ಭಾಗಕ್ಕೆ ಹೋಗಿದ್ದ ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆಯವರು ಮತ್ತು ಸ್ಥಳೀಯ ಯುವಕರು ಸೇರಿ ರಾತ್ರಿಯೆ ಕಾಡಿಗೆ ಅಟ್ಟಿದ್ದರು. ಆದರೆ ಇಂದು ಮುಂಜಾನೆಯ ವೇಳೆ ಅದೇ ಕಾಡಾನೆಗಳ ಹಿಂಡು ಕೊರತೋಡಿ ಭಾಗದಲ್ಲಿ ರಸ್ತೆಯಲ್ಲಿ ಸಂಚರಿಸಿದೆ.

ಸುದ್ದಿ ವರದಿಗಾರನ ಮನೆಯಂಗಳಕ್ಕೆ ಬಂದ ಕಾಡಾನೆ

ಮುಂಜಾನೆ 3 ಗಂಟೆಯ ವೇಳೆಗೆ ಸುದ್ದಿ ಬಿಡುಗಡೆ ವರದಿಗಾರ ದಯಾನಂದ ಕೊರತ್ತೋಡಿಯವರ ಮನೆಯ ಅಂಗಳಕ್ಕೆ ಕಾಡಾನೆಗಳು ಬಂದವು. ಆನೆಯನ್ನು ನೋಡಿ ನಾಯಿ ಜೋರಾಗಿ ಬೊಗಳಲು ಅರಂಭಿಸಿತ್ತು. ತಕ್ಷಣ ಆನೆ ಜೋರಾಗಿ ಘೀಳಿಟ್ಟಿತ್ತು. ಆನೆ ಘೀಳಿಟ್ಟ ಸದ್ದಿಗೆ ಮನೆಯವರಿಗೆ ಎಚ್ಚರವಾಗಿ ಭಯದಿಂದ ಹೊರಗೆ ನೋಡಿದಾಗ ಹೊರಗಡೆ ಆನೆ ಇರುವುದು ಕಂಡು ಬಂತು. ಬಳಿಕ ಪಟಾಕಿ ಸಿಡಿಸಿದಾಗ ಆನೆಗಳು ತೋಟದ ಕಡೆಗೆ ಓಡಿದವು. ತೋಟದಲ್ಲಿ ಬಾಳೆ, ತೆಂಗಿನ ಗಿಡಗಳನ್ನು ನಾಶ ಮಾಡಿ ಅಲ್ಲಿಂದ ಲಕ್ಹ್ಮೀ ಕೊರತ್ತೋಡಿಯವರ ತೋಟದಲ್ಲಿದ್ದ ಬಾಳೆಗಿಡಗಳನ್ನು ನಾಶ ಮಾಡಿವೆ. ಅಲ್ಲಿಂದ ದೇವಪ್ಪ ನಾಯಕ್ ರವರ ತೋಟಕ್ಕೆ ನುಗ್ಗಿ ಕೃಷಿ ಹಾನಿಗೊಳಿಸಿವೆ.

ಕಾಡಾನೆಗಳು ಇದೀಗ ಮುಖ್ಯ ರಸ್ತೆಗೆ ರಸ್ತೆಯಲ್ಲಿ ಸಂಚಾರಿಸುತ್ತಿರುವುದು ಸಾರ್ವಜನಿಕರಲ್ಲಿ ಭಯ ಉಂಟು ಮಾಡಿದೆ. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ಬಾಳೆ, ತೆಂಗಿನ ಗರಿಗಳನ್ನು ನೋಡಿ ಸಾರ್ವಜನಿಕರಲ್ಲಿ ಆತಂಕ ಮಡುಗಟ್ಟಿದೆ.